ಮಾದಕ ದ್ರವ್ಯ ವ್ಯಸನ ಕುಟುಂಬಕ್ಕೆ ಮಾರಕ: ಅಬ್ದುಲ್ ಸಲೀಂ
ಬಳ್ಳಾರಿ 13: ಮಾದಕ ದ್ರವ್ಯ ವ್ಯಸನದ ದುಷ್ಟಪರಿಣಾಮಗಳು ಕೇವಲ ವ್ಯಕ್ತಿಗೆ ಅಲ್ಲದೆ ಪೂರ್ಣ ಕುಟುಂಬಕ್ಕೆ ಮಾರಕ ಎಂದು ಗೌರವನ್ವಿತ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶ ಅಬ್ದುಲ್ ಸಲೀಂರವರು ಗುರು ತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ದಿ. 02ರಿಂದ 14ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿ ಜೀವನ ಅತಿ ಮುಖ್ಯವಾದ ಜೀವನಘಟ್ಟವಾಗಿದ್ದು ಈ ಸಂಧರ್ಭದಲ್ಲಿ ಮುಂದೆ ಗೌರವಾನ್ವಿತರು ಎನಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡು ಬದುಕು ಕಟ್ಟಿಕೊಳ್ಳಬೇಕಾಗುತ್ತದೆ. ಯಾವುದೇ ದಾರಿ ತಪ್ಪುವ ಕೃತ್ಯಗಳಿಗೆ ಅವಕಾಶ ನೀಡಬಾರದು. ಒಂದು ವೇಳೆ ಅದು ಸಂಭವಿಸಿದರೆ ಕೇವಲ ವ್ಯಕ್ತಿಗೆ ಅಲ್ಲದೆ ಪೂರ್ಣ ಕುಟುಂಬಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಎಂದು ಉದಾಹರಣೆಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಿವೃತ್ತ ಕಾನೂನು ಮಹವಿದ್ಯಾಲಯ ಪ್ರಾಚಾರ್ಯರು ಹಾಗೂ ಹಾಲಿ ಮುಖ್ಯ ಪ್ರಾಧ್ಯಾಪಕರಾದ ಡಾ. ಯು. ಷಾಡಕ್ಷರ ಗೌಡರವರು ಮಾತನಾಡಿ ಕಾನೂನು ಜ್ಞಾನ ಗೋತ್ತಿಲ್ಲದೇ ಇದ್ದರು ಅಫರಾದ ಕ್ಷಮೆಗೆ ಆರ್ಹವಾಗುವುದಿಲ್ಲ ಈ ಮಾದಕ ವಸ್ತುಗಳ ಬಳಕೆ ಇತರೆ ಕಾನೂನು ಬಹಿರ ಕರ್ತವ್ಯಗಳು ಶಿಕ್ಷಾರ್ಹವಾಗಿರುವುದರಿಂದ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಎಂ. ಹಾಲೇಶ್ ಪೋಲಿಸ್ ಇನ್ಸ್ಪೆಕ್ಟರ್ ಗಾಂಧೀನಗರ ಪೋಲಿಸ್ ಠಾಣೆ ಇವರು ಮಾತನಾಡಿ ತಂದೆ-ತಾಯಿ ಶಿಕ್ಷಕರು ಹಾಗೂ ಎಲ್ಲರು ಕೂಡ ವಿದ್ಯಾರ್ಥಿಗಳನ್ನು ಒಳ್ಳೆ ದಾರಿಯಲ್ಲಿಡಲು ಪ್ರಯತ್ನಸಬೇಕು. ನ್ಯಾಕೋಟ್ರಿಕ್ಸ್ ಮತ್ತು ಸೈಕೋಟ್ರೊಫಿಕ್ ಡ್ರಗ್ಸ ಬಗ್ಗೆ ವಿವರಗಳನ್ನು ನೀಡಿ ಇವುಗಳ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ಸೂಚಿಸಿದರು.
ನ್ಯಾಯವಾಧಿಗಳಾದ ನಾಸಿರುದ್ದೀನ್ ರವರು ಮಾತನಾಡಿ ಮಕ್ಕಳನ್ನು ಅಮಯಕತೆಯನ್ನು ಉಪಯೋಗಿಸಿಕೊಂಡು ಡ್ರಗ್ಸ ವ್ಯವಹಾರದಲ್ಲಿರುವವರು ದಾರಿ ತಪ್ಪಿಸುತ್ತಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇದ್ದು ಅಂಥಹ ವಿಷಯಗಳನ್ನು ಪ್ರಾಚಾರ್ಯರ ಅಥವ ತಂದೆ ತಾಯಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ವಂದನೆಯನ್ನು ಮಾಡಿದ ಪ್ರಾಚಾರ್ಯ ಜಿ. ನಾಗರಾಜ್ ರವರು ಮಾತನಾಡಿ ಮುಖ್ಯವಾಗಿ ನಾಡಿನ ಯುವ ಪೀಳಿಗೆ ದಾರಿ ತಪ್ಪದಂತೆ ಅರಿವು ಮೂಡಿಸಬೇಕೆಂಬುದು ಆಜಾದಿ ಕಾ ಅಮೃತ ಮಹೋತ್ಸವದ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಯಾವುದೇ ಅಮಿಷ ಅಥವಾ ಭಯ ಪಡಿಸಿ ದಂಧೆ ಕೋರರು ಒಡ್ಡುವ ಜಾಲಕ್ಕೆ ಬಲಿಯಾಗಬಾರದು ಯಾವಾಗಲೂ ವಿವೇಕದಿಂದ ಎನು ಮಾಡಬೇಕು ಯಾವುದು ಮಾಡಬಾರದು ಎಂಬುದನ್ನು ಅರಿತು ವಿದ್ಯಾರ್ಥಿ ದೆಸೆೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.