ಪರಸರ ನಾಶದಿಂದ ಬರಗಾಲದ ಛಾಯೆ ಮೂಡುತ್ತಿದೆ: ಎಸ್ಪಿಬಿ ಮಹೇಶ ಕಳವಳ
ಉಗರಗೋಳ 05: ಇಂದಿನ ಕಂಪ್ಯೂಟರ್ ಯುಗದಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಗಿಡ, ಮರಗಳನ್ನು ಕಡಿದು ಪರಸರ ಹಾಳು ಮಾಡುತ್ತಿದ್ದಾನೆ. ಇದರಿಂದಾಗಿ ಮಳೆಯಾಗದೆ ಬರಗಾಲದ ಛಾಯೆ ಮೂಡುತ್ತಿದೆ ಎಂದು ದೇವಸ್ಥಾನ ಕಾರ್ಯನಿವಾಹಕ ಅಧಿಕಾರಿ ಎಸ್ಪಿಬಿ ಮಹೇಶ ಕಳವಳ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿನ ದೇವಿ ವನದಲ್ಲಿ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನಿಗೆ ಪರಿಸರದ ಕಾಳಜಿ ಇಲ್ಲದ್ದರಿಂದ ಭೂ ತಾಯಿಯ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಪರಿಸರ ನಾಶ ಹೆಚ್ಚಾದರೆ ಜೀವ ಜಗತ್ತು ಉಳಿಯಲು ಸಾಧ್ಯವಿಲ್ಲ ಎಂದ ಅವರು ಪ್ರತಿಯೊಬ್ಬ ನೌಕರರು, ವಿದ್ಯಾರ್ಥಿಗಳು, ರೈತರು, ನಾಗರಿಕರು. ಮನೆ, ಹೊಲ ಗದ್ದೆ, ಶಾಲೆ, ಕಾಲೇಜು ತೋಟಗಳಲ್ಲಿ ಗಿಡಗಳನ್ನು ನೆಡುವಂತೆ ಕೋರಿದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವಾಯ್ ವಾಯ್ ಕಾಳಪ್ಪನವರ ದೇವಸ್ಥಾನ ಅಧೀಕ್ಷಕಿ ನಾಗರತ್ನಾ ಚೋಳಿನ, ಅಲ್ಲಮಪ್ರಭು ಪ್ರಭುನವರ, ಕಿರಣ್ ಮಹೇಂದ್ರಕರ, ಸಂಗಮೇಶ ಪಂಪನವರ, ಅನಿಲ ಗುಡಿಮನಿ, ಗೃಹ ರಕ್ಚಷಕ ಧಳ ಸಿಬ್ಬಂದಿ. ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.