ಬಳ್ಳಾರಿ

ಸಾಂಸ್ಕೃತಿಕ ಗಡಿ ಉತ್ಸವಕ್ಕೆ ಚಾಲನೆ

ಸಾಂಸ್ಕೃತಿಕ ಗಡಿ ಉತ್ಸವಕ್ಕೆ ಚಾಲನೆ

ಬಳ್ಳಾರಿ 11: ಕರ್ನಾಟಕ ಗಡಿ ಪ್ರದೇಶಗಳ ಗ್ರಾಮೀಣ ಭಾಗದ ಜನರ ನೆಚ್ಚಿನ ಸಾಂಸ್ಕೃತಿಕ ಗಂಡು ಕಲೆಗಳಾದ ಬಯಲಾಟ, ದೊಡ್ಟಾಟ ಸೇರಿದಂತೆ ಇತರ ಜಾನಪದ ಕಲೆಗಳು ಪ್ರಸ್ತುತ ಆಧುನಿಕ ದಿನಗಳಲ್ಲಿಯೂ  ಹೆಚ್ಚು ಖ್ಯಾತಿಯನ್ನು ಪಡೆದಿರುವುದು ಶ್ಲಾಘನೀಯ ವಿಚಾರ ಎಂದು ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್‌ನ ಸಂಸ್ಥಾಪಕಿ ಸುಜಾತಮ್ಮ ಅವರು ಅಭಿಪ್ರಾಯಪಟ್ಟರು.  

ಅವರು ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್‌ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿನ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಗಡಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. 

ಕೆ.ಪಿ.ಸಿ.ಸಿ. ವಕ್ತಾರರಾದ ಬಿ.ಎಂ.ಪಾಟೀಲ್ ಅವರು ಮಾತನಾಡುತ್ತಾ, ಗಡಿ ಪ್ರದೇಶದಲ್ಲಿ ಹೆಚ್ಚಿನ ಅನುದಾನ ನೀಡಿ ಸಂಘ ಸಂಸ್ಥೆಗಳಿಗೆ  

ಕಾರ್ಯಕ್ರಮಗಳನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃಧ್ಧಿ ಪ್ರಾಧಿಕಾರ, ಬೆಂಗಳೂರು ಇವರನ್ನು ಕೋರಿದರು. ಕರ್ನಾಟಕ ಏಕೀಕರಣ ರಕ್ಷಣಾ ಸಮಿತಿ ಇವರು ಕನ್ನಡದ ನೆಲ, ಜಲ, ಕನ್ನಡ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು ಎಂದು, ಕನ್ನಡ ಭಾಷೆ, ಕನ್ನಡಪರ ಹೋರಾಟಗಳನ್ನು ಅವರು ಬಿಂಬಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಸೌಭಾಗ್ಯ ತಿರುಮಲಮೂರ್ತಿ, ಬಳ್ಳಾರಿ ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷರಾದ ಹೆಚ್‌.ಲಕ್ಷ್ಮಣ ಅವರುಗಳು ಮಾತನಾಡಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ಸದಾಶಿವ ವಹಿಸಿದ್ದರು. ಈ ಸಂದರ್ಭದಲ್ಲಿ ಕೃಷ್ಣ, ಬಜ್ಜಪ್ಪ (ಬುಜ್ಜಿ), ತಿಪ್ಪೇಸ್ವಾಮಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಬಿ.ಎಂ.ಮಹೇಶ್ವರಸ್ವಾಮಿ ಎರೆ​‍್ರಮ್ಮ, ಬಿ.ಲಕ್ಷ್ಮಿನಾರಾಯಣ ಇವರುಗ ರಂಗಗೀತೆಗಳನ್ನು ಹಾಡಿದರು. ಕೆ.ಕುಸುಮ ಮತ್ತು ಬಿ.ಗೀತಿಕ ನಾಟ್ಯ ಪ್ರದರ್ಶಿಸಿದರು. ಬಿ.ಮಂಜಣ್ಣ, ಬಸವರಾಜ ಕವಿಗೋಷ್ಠಿ ನಡೆಸಿದರು.  

ಕರ್ನಾಟಕ ಏಕೀಕರಣ ರಕ್ಷಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷರಾದ ಪಿ.ಶೇಖರ್, ಕನ್ನಡ ನಾಡು ನುಡಿಯ ಬಗ್ಗೆ ವಿಚಾರ ನಡೆಸಿ, ಕನ್ನಡಪರ ಹೋರಾಟದ ಬಗ್ಗೆ ಮಾತನಾಡಿದರು. ಇವರೊಂದಿಗೆ ಗಡ್ಡಂ ತಿಮ್ಮಪ್ಪ, ಮತ್ತು ಬಿ.ಕೃಷ್ಣ ಜೊತೆಗೂಡಿದರು. ಕನ್ನಡಪರ ಚಿಂತಕರಾದ ಎಂ.ಗಿರಿಜಾಪತಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು.  

ಈ ಸಂದರ್ಭದಲ್ಲಿ ರತಿ ಕಲ್ಯಾಣ ಬಯಲಾಟ ಪ್ರದರ್ಶನ ನಡೆಸಿದರು. ಟ್ರಸ್ಟ್‌ನ ಕಾರ್ಯದರ್ಶಿಗಳಾದ ಬಿ.ಲಕ್ಷ್ಮಿನಾರಾಯಣ ವಂದಿಸಿದರು. ಪ್ರಾರ್ಥನೆ ಗೀತೆಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸುಜಾತಮ್ಮ ಹಾಡಿದರು. ಜಿ.ಕೆ.ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್‌ನ ವತಿಯಿಂದ ಕಲಾವಿದರಿಗೆ ಹಾಗೂ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. 


ಸುದ್ದಿ ಓದಿ