8ನೇ ದಿನದ ವೃಕ್ಷಾರೋಪಣ ಅಭಿಯಾನಕ್ಕೆ ಚಾಲನೆ
ಬಳ್ಳಾರಿ 30: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬಳ್ಳಾರಿ ನಗರ ಘಟಕದ ವತಿಯಿಂದ ಬಳ್ಳಾರಿ ನಗರ ಕಾರ್ಯಕಾರಿಣಿ ಸದಸ್ಯ ವಿನೋದ್ ಗೊಂದಲ್ ಅವರ ನೇತೃತ್ವದಲ್ಲಿ ವೃಕ್ಷಾರೋಪಣ ಅಭಿಯಾನದ 8ನೇ ದಿನವಾದ ದಿ. 30ರಂದು ಬಳ್ಳಾರಿ ನಗರ 36ನೇ ವಾರ್ಡ್ನ ರಾಜೇಶ್ವರಿ ನಗರದಲ್ಲಿ 25 ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ 36ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಪಿ.ಕಲ್ಪನ ವೆಂಕಟರಾಮರೆಡ್ಡಿ ಅವರು ಚಾಲನೆ ನೀಡಿದರು.
ಇದೇ ರೀತಿ ನಗರದ ಪ್ರತಿಯೊಂದು ವಾರ್ಡಿನಲ್ಲೂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ನಗರದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪಿ.ವೆಂಕಟರಾಮಿರೆಡ್ಡಿ, ಯುವ ಮೋರ್ಚಾ ಬಳ್ಳಾರಿ ನಗರ ಘಟಕ ಅಧ್ಯಕ್ಷ ಅರುಣ್ ಬಾಲಚಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಓಂ ಪ್ರಕಾಶ್, ಉಮೇಶ್, ಉಪಾಧ್ಯಕ್ಷರಾದ ಸುಧಾಕರ್, ವಿನೋದ್ಕುಮಾರ್, ಸತೀಶ್ ದುರ್ಗಾಪ್ರಸಾದ್, ಉಲ್ಲಾಸ್, ಜೀವನ್, ಬಸವರಾಜ್, ಸಾಗರ್, ಕುಮಾರಸ್ವಾಮಿ, ಕೃಷ್ಣ ಹಾಜರಿದ್ದರು.