ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 09: ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿಯ ನೇಕಾರ ಕಾಲೋನಿಯ ಬನಶಂಕರಿ ದೇವಸ್ಥಾನದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು. ಪುರಾಣ ಪ್ರವಚನ ಕಾರ್ಯಕ್ರಮವನ್ನು ದೇವಾಂಗ ಸಮಾಜದ ಅಧ್ಯಕ್ಷ ಬೆಟಗೇರಿ ಪಂಪಣ್ಣ ಹಾಗೂ ಸರ್ವ ಸದಸ್ಯರು ಮತ್ತು ಬನಶಂಕರಿ ದೇವಿ ಸೇವಾ ಟ್ರಸ್ಟ್ನ ಅಧ್ಯಕ್ಷ ಎನ್.ಜಿ.ವಿರುಪಾಕ್ಷ ,ಬೆಟಗೇರಿ ನಾಗರಾಜ್, ಎಸ್.ಶಂಕರಾನಂದ, ಕೆ.ಮನೋಹರ, ಕೆ.ಆನಂದ, ಕೆ.ಮಲ್ಲಿಕಾರ್ಜುನ, ಬನಶಂಕರಿ ದೇವಿ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿ ಉದ್ಘಾಟಿಸಿದರು. ಪ್ರವಚನಕಾರರಾಗಿ ಕೆ.ಶಿವಪ್ರಕಾಶ್, ಸಂಗೀತ ಮಾರುತಿ ಆಚಾರ್, ಸೋಮನಾಥ್ ಆಚಾರ್ ಇದ್ದರು.9 ದಿನಗಳ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.