ಉಚಿತ ನೋಟ ಬುಕ್ ವಿತರಣೆಗೆ ಚಾಲನೆ
ಲೋಕದರ್ಶನ ವರದಿ
ಶಿಗ್ಗಾವಿ 14: ಭಾರತದಲ್ಲಿದ್ದಿವೆಯೋ, ಸಿಂಗಪುರದಲ್ಲಿದ್ದಿವೆಯೋ ಎಂದು ವಿಶ್ವದಲ್ಲಿ ಯಾವ ದೇಶದಲ್ಲಿದ್ದೀವೆಯೋ ಎಂದು ಭಾಸವಾಗುವಎಲ್ಲ ಸೌಲಭ್ಯದ ಜೊತೆಗೆ ಆಧುನಿಕತೆಯ ಸೊಬಗು ನೀಡುವ ಯೋಜನೆ ಇದಾಗಿದೆ ಅದೇ ಗಂಗೀಭಾವಿಯ ಶಶಿಧರ ಯಲಿಗಾರ ರೆಸಾರ್ಟ ಎಂದು ನಾಡೋಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ತಾಲೂಕಿನ ಗಂಗೀಭಾವಿಯ ಶಶಿಧರ ಯಲಿಗಾರರೆ ಸಾರ್ಟನಲ್ಲಿ ಅಮೃತ ಮಹೋತ್ಸವ ಹಾಗೂ ದಿವಂಗತ ಸಿ.ಬಿ.ಯಲಿಗಾರ ಅವರ 84 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಶಿಗ್ಗಾವಿ ಸವಣೂರ ತಾಲೂಕಿನ ಮಕ್ಕಳಿಗೆ ನೀಡುವ ಉಚಿತ ನೋಟ ಬುಕ್ ವಿತರಣೆಗೆ ಚಾಲನೆ ನೀಡಿ ಮಾತನಾಡಿ ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಸಾಹಿತ್ಯ ಓದಿದಾಗ ಎಲ್ಲವೂ ಸ್ವರ್ಗದಲ್ಲಿ ಸಿಗುತ್ತದೆ ಅದೇಸ್ವರ್ಗ ಇಷ್ಟು ಚೆನ್ನಾಗಿರುತ್ತದೆ, ಸೌಂದರ್ಯದಿಂದ ಕೂಡಿರುತ್ತದೆ, ಪಶುಗಳು, ಪಕ್ಷಿಗಳು, ಹಣ್ಣುಗಳು, ಹಚ್ಚ ಹಸಿರು ವಾತಾವರಣ, ಶುಭ್ರವಾದ ನೀರು ದಾರಾಳವಾಗಿ ಸಿಗುತ್ತದೆ ಸ್ವರ್ಗದಲ್ಲಿ ಧಾರಾಳವಾಗಿ ಸಿಗುತ್ತದೆ ಎಂದು ಪುಸ್ತಕದಲ್ಲಿ ಓದಿದ್ದೆ ಶಶಿಧರ ಯಲಿಗಾರ ರೆಸಾರ್ಟ ನೋಡಿದ ಮೇಲೆ ಇದೇ ನಿಜವಾದ ಸ್ವರ್ಗಎಂದು ಭಾಸವಾಗುತ್ತದೆ ಎಂದರು.
ಕರ್ನಾಟಕದ ಪ್ರವಾಸೋದ್ಯಮದಲ್ಲಿ ಅತ್ಯಂತ ಶಿಖರವಾಗಿ ಬೆಳೆಯುತ್ತಿರುವ 43 ಎಕರೆ ಕ್ಷೇತ್ರದಲ್ಲಿ ಗಂಗೀಭಾವಿ ಪುಣ್ಯಕ್ಷೇತ್ರ, ಗಂಗೆಯು ಧಾರಕಾರವಾಗಿ ಸಿಗುವ ಹಾಗೂ ವಿಸ್ತೀರ್ಣವಾದ ಕೆರೆಯನ್ನು ಹೊಂದಿದ ಎಲ್ಲ ಯೋಜನೆಗಳನ್ನು ಒಳಗೊಂಡ ಯೋಜನೆ ಇದಾಗಿದೆ ಪೂರ್ಣಗೊಳ್ಳಲು 5 ವರ್ಷ ಸಮಯಬೇಕು ಇದು ಯಶಸ್ವಿಯಾಗಲು ಅವರ ಧರ್ಮಪತ್ನಿ ಸುನೀತಾ ಯಲಿಗಾರ ಕಾರಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಸ್ತ್ರೀ ಯಶಸ್ವಿ ಹಿಂದೆ ಪುರುಷ ಹಾಗೂ ಪುರುಷನ ಯಶಸ್ವಿ ಹಿಂದೆ ಸ್ತ್ರೀ ಇರುತ್ತಾಳೆ ಶುಭವಾಗಲಿ ಎಂದು ಎಲ್ಲರ ಪರವಾಗಿ ಶುಭ ಹಾರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಾನಪದ ವಿ.ವಿ. ಕುಲಪತಿ ಡಾ.ಟಿ.ಸಿ.ಗುರುಪ್ರಸಾದ, ರಾಮಲಿಂಗಶೆಟ್ಟಿ, ಬಿ.ಎಮ್.ಪಟೇಲ್, ವಿ.ಆರ್.ಹಿರೇಮಠ, ಲಿಂಗರಾಜ ಅಂಗಡಿ, ಪ್ರೊ. ಶ್ರೀಶೈಲ ಹುದ್ದಾರ, ಲಿಂಗಯ್ಯ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಸವರಾಜ ಕುರಗೋಡಿ ಕಾರ್ಯಕ್ರಮ ನಿರ್ವಹಿಸಿದರು