ಕುಡಿಯುವ ನೀರು ಸಂಗ್ರಹಕ್ಕೆ ಚಾಲನೆ
ಬಳ್ಳಾರಿ 01: ತಾಲ್ಲೂಕಿನ ಹಂದಿಹಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವ ನಿಟ್ಟಿನಲ್ಲಿ ಮತ್ತು ಬೇಸಿಗೆ ಕುಡಿಯುವ ನೀರಿನ ಅಭಾವ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಹಂದಿಹಾಳು ಗ್ರಾಮ ಪಂಚಾಯಿತಿಯ ಪದಾಧಿಕಾರಿಗಳು ಕುಡಿಯುವ ನೀರಿನ ಸಂಗ್ರಹಗಾರಕ್ಕೆ ನೀರು ತುಂಬಿಸುವ ಕಾರ್ಯಕ್ಕೆ ಗುರುವಾರದಂದು ಚಾಲನೆ ನೀಡಿದರು.
ಹಂದಿಹಾಳು ಗ್ರಾಮದ ಸಮೀಪದಲ್ಲಿ ತುಂಗಭದ್ರ ಜಲಾಶಯದ ಎಲ್.ಎಲ್.ಸಿ ಕಾಲುವೆಯು ಹಾದು ಹೋಗುತ್ತಿದ್ದು, ಅಲ್ಲಿಗೆ ಸಮೀಪದ ಕಾಲುವೆಯಿಂದ ಗ್ರಾಮದ ಕುಡಿಯುವ ನೀರಿನ ಸಂಗ್ರಹಗಾರ (ಕೆರೆ)ಗೆ ನೀರು ತುಂಬಿಸುವ ಕಾರ್ಯಕ್ಕೆ ಪಂಚಾಯಿತಿಯಿಂದ ಸರ್ವ ಸದಸ್ಯರು ಸೇರಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರಿಗೆ ಮನವಿ ಮಾಡಲಾಗಿತ್ತು. ಶಾಸಕರು ಎಲ್.ಎಲ್.ಸಿ. ಕಾಲುವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿಗಳಿಂದ ಅನುಮತಿ ಪಡೆದು ಕೆರೆಗೆ ನೀರು ತುಂಬಿಸಲು ಪಂಪ ಆಪರೇಟರ್ಗೆ ಆದೇಶಿಸಿದರು. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿಗಳಿಂದ ಅನುಮತಿ ಕೊಡಿಸಿದ್ದರು. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಮುಂಜಾಗ್ರತೆ ವಹಿಸಲಾಗಿದೆ.
ಈ ಸಂದರ್ಭದಲ್ಲಿ ಗ್ರ.ಪಂ. ಸದಸ್ಯ ಪವಿತ್ರ ಪರಶುರಾಮ, ಪಂಪಾಪತಿ, ವೆಂಕಟರೆಡ್ಡಿ, ಕೇಶವ, ಗ್ರ.ಪಂ. ಪಿಡಿಓ ಪದ್ಮಾಚಾರಿ, ಪಂಪ ಆಪರೇಟರ್ ಅಲ್ಲಿಸಾಬು, ಹಾಗೂ ಗುಡುದೂರು ಗ್ರಾಮಸ್ಥರು ಹಾಜರಿದ್ದರು.