ಆರೋಗ್ಯ ಇಲಾಖೆಯ ಮೆಗಾ ವ್ಯಾಕ್ಸಿನೇಷನ್ ಕ್ಯಾಂಪ್ಗೆ ಚಾಲನೆ
ಹಗರಿಬೊಮ್ಮನಹಳ್ಳಿ 21 : ಪಟ್ಟಣದ ಗುರುಭವನದಲ್ಲಿ ಸೋಮವಾರ ಆಯೋಜಿಸಿದ 18ವರ್ಷದ ಮೇಲ್ಪಟ್ಟವರಿಗೆ ಕೋವಿಡ್ ಪ್ರಥಮ ಡೋಸ್ನ ಮೆಗಾ ವ್ಯಾಕ್ಸಿನೇಷನ್ ಕ್ಯಾಂಪ್ಗೆ ಶಾಸಕ ಭೀಮಾನಾಯ್ಕ್ ಸೇರಿದಂತೆ ತಾಲೂಕಾಡಳಿತ, ಆರೋಗ್ಯ ಇಲಾಖೆಯು ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಶಾಸಕ ಎಸ್.ಭೀಮಾನಾಯ್ಕ್ ಮಾತನಾಡಿ ಇಂದು ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಯುವಕರು ಸ್ವಯಂಪ್ರೇರಿತವಾಗಿ ಬರುತ್ತಿರುವುದು ಸಂತೋಷದ ವಿಷಯವಾಗಿದೆ, ಧೈರ್ಯವೇ ಮೊದಲ ವ್ಯಾಕ್ಸಿನ್ ಆಗಿದೆ ,ಎರಡನೇ ಅಲೆಯ ಭೀಕರ ಪರಿಸ್ಥಿತಿಯನ್ನು ಮನಗೊಂಡು ಇಂದು ಪ್ರತಿಯೊಬ್ಬರೂ ಲಸಿಕೆ ಪಡೆಯುತ್ತಿದ್ದಾರೆ,ಲಸಿಕೆಯು ಸೊಂಕಿನಿಂದ ರಕ್ಷಿಸುತ್ತದೆ,ಕ್ಷೇತ್ರದಲ್ಲಿ ಕರೋನಾ ಸೊಂಕಿನಿಂದ ಮೃತ ಪಟ್ಟವರ ಕುಟುಂಬಕ್ಕೆ ವೈಯಕ್ತಿಕವಾಗಿ ಹತ್ತು ಸಾವಿರ ಹಣ ನೀಡುವುದಗಿ ಭರವಸೆ ನೀಡಿದರು.
ಪಟ್ಟಣದ ಅಂಗನವಾಡಿ ಕೇಂದ್ರ,ಸಮುದಾಯ ಭವನ,ಗುರುಭವನ,ಗ್ರಮೀಣ ಭಾಗದ ಪ್ರಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆಗಳಲ್ಲಿ ಲಸಿಕಾ ಅಭಿಯನವನ್ನು ಮಾಡಲಾಗುತ್ತಿದೆ ಸಂಜೆ 3.30ರ ವೇಳೆಗೆ 10ಸಾವಿರ ಲಸಿಕೆ ಹಾಕಲಾಗಿದೆ ಇಂದು ನಮ್ಮಲ್ಲಿರುವ 15ಸಾವಿರ ಲಸಿಕೆಯನ್ನು ಹಾಕುವ ಗುರಿ ತಲುಪುವ ಭರವಸೆಯನ್ನು ನೀಡಿ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ತಹಶಿಲ್ದಾರ್ ಶರಣಮ್ಮ,ಇಒ ಹಾಲಸಿದ್ದಪ್ಪ ಪೂಜಾರಿ,ಬಿಇಒ ಶೇಖರ್ಪ ಹೊರಪೇಟೆ,ತೋಟಗಾರಿಕಾ ಇಲಾಖೆ ನಿರ್ದೇಶಕ ಪರಮೇಶ್ವರ್ಪ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿನೇಶ್, ಪು.ಸಭೆ.ಸದಸ್ಯ ಅಲ್ಲಾಬಕ್ಷಿ, ಮುಖಂಡರಾದ ಹೆಗ್ಡಾಳ್ ರಾಮಣ್ಣ, ಹಾಲ್ದಾಳ್ ವಿಜಯಕುಮಾರ, ಬಾಲಕೃಷ್ಣ ಬಾಬು, ಸೆರೆಗಾರ ಹುಚ್ಚಪ್ಪ, ಮರಿ ರಾಮಣ್ಣ ಸೇರಿದಂತೆ ಇನ್ನಿತರರು ಇದ್ದರು.