ಹುನಗುಂದ

ದೇಶವಾಸಿಗಳಿಗೆ ಲಸಿಕೆ ನೀಡಿ ಕೊರೊನಾ ರೋಗಕ್ಕೆ ಬ್ರೇಕ್

ದೇಶವಾಸಿಗಳಿಗೆ ಲಸಿಕೆ ನೀಡಿ ಕೊರೊನಾ ರೋಗಕ್ಕೆ ಬ್ರೇಕ್

ಶಾಸಕ ದೊಡ್ಡನಗೌಡ ಪಾಟೀಲ ಹೇಳಿಕೆ: ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ 

ಹುನಗುಂದ 18: ಕಳೆದ ಹತ್ತು ಹನ್ನೊಂದು ತಿಂಗಳುಗಳಿಂದ ಇಡೀ ದೇಶದ ಜನರನ್ನು ಬೆಚ್ಚಿ ಬೀಳಿಸಿದ್ದ ಮಹಾಮಾರಿ ಕೊರೊನಾ ರೋಗಕ್ಕೆ ಸಧ್ಯ ಲಸಿಕೆಯನ್ನು ಕಂಡು ಹಿಡಿದು ಭಾರತ ದೇಶದ 130 ಕೋಟಿ ದೇಶವಾಸಿಗಳಿಗೆ ನೀಡುವ ಮೂಲಕ ಕೊರೊನಾ ರೋಗಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.                                               ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 

ಅವರು ಮಹಾಮಾರಿ ರೋಗಕ್ಕೆ ಇಡೀ ಭಾರತ ದೇಶ ಸೇರಿದಂತೆ ವಿಶ್ವದ ಜನರು ನಲುಗಿ ಹೋಗಿದ್ದರು.ಈ ದೇಶದ ವೈದ್ಯಕೀಯ ವಿಜ್ಞಾನಿಗಳು ಜನರ ನರಳಾಟವನ್ನು ನೋಡದೇ ಅಹೋರಾತ್ರಿ ಪರಿಶ್ರಮಪಟ್ಟು ವರ್ಷ ಕಳೆಯುವ ಮುಂಚೆನೇ ಕೋವ್ಯಾಕ್ಸೀನ್ ಅವಿಷ್ಕಾರಿಸಿದ್ದು ನಿಜಕ್ಕೂ ಶ್ಲಾಘನೀಯ. ಕೋವ್ಯಾಕ್ಸೀನ್ ತಯಾರಿಸಲು ನಿರಂತರ ಶ್ರಮ ವಹಿಸಿದ ವಿಜ್ಞಾನಿಗಳಿಗೆ ಅದನ್ನು ಏಕಕಾಲದಲ್ಲಿ ದೇಶದ ಎಲ್ಲ ರಾಜ್ಯಗಳಿಗೆ ಹಂಚಿಕೆ ಮಾಡಿದ ಪ್ರಧಾನಮಂತ್ರಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಸಧ್ಯ ಲಸಿಕೆಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತರಿಗೆ, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಕೊರೊನಾ ಸಂದರ್ಭದಲ್ಲಿ ನಿರಂತರ ಕಾರ್ಯ ನಿರ್ವಹಿಸಿದ ಎಲ್ಲ ಕೊರೊನಾ ವಾರಿಯರ್ಸ್‍ಗಳಿಗೆ ನೀಡಲಾಗುವುದು ಎಂದರು.            ತಾಲೂಕಾ ವೈದ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ ಮಾತನಾಡಿ ಕೊರೊನಾ ಲಸಿಕೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿದ್ದು ಇನ್ನು ಮುಂದೆ ರೋಗದ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲವಾಗಿದ್ದರೂ ಸಹ ರೋಗದ ಬಗ್ಗೆ ಸ್ವಲ್ಪ ಜಾಗೃತಿ ವಹಿಸುವುದು ಅಷ್ಟೇ ಅವಶ್ಯಕತೆ ಇದೆ ಎಂದರು. 1ನೇ ಹಂತಲ್ಲಿ ಆರೋಗ್ಯ ಇಲಾಖೆ, 2ನೇ ಹಂತದಲ್ಲಿ ಕಂದಾಯ ಮತ್ತು 3ನೇ ಹಂತದಲ್ಲಿ ಸಾರ್ವಜನಿಕರಿಗೆ ಹಂತ ಹಂತವಾಗಿ ಹೆಸರು ನೋಂದಾಯಿಸಿದ ನಂತರ ಲಸಿಕೆ ಹಾಕಲಾಗುವದು. 

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಮೊಟ್ಟಮೊದಲು ಲಸಿಕೆಯನ್ನು ನೀಡಲಾಯಿತು. ಈ ವೇಳೆ ತಹಶೀಲ್ದಾರ ಬಸವರಾಜ ನಾಗರಾಳ, ಆರೋಗ್ಯ ರಕ್ಷಾ ಸಮಿತಿಯ ಉಪಾಧ್ಯಕ್ಷ ಮಹಾಂತೇಶ ಕಡಪಟ್ಟಿ, ತಾ.ಪಂ ಅಧ್ಯಕ್ಷ ಅನ್ನದಾನೇಶ್ವರ ನಾಡಗೌಡ, ಇಲಕಲ್ಲ ತಾ.ಪಂ ಇಒ ಸಿ.ಬಿ.ಮ್ಯಾಗೇರಿ ಮುಖಂಡರಾದ ಸಂಗಣ್ಣ ಕಡಪಟ್ಟಿ. ಅಪ್ಪು ಆಲೂರ, ಸಂಗಮೇಶ ಚೂರಿ, ಎಲ್.ಎಸ್. ಮುಕ್ಕಣ್ಣವರ, ಮುಖ್ಯ ವೈಧಾಧಿಕಾರಿ ನಂಜುನಾಥ ಅಂಕೋಲ್ಕರ  ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.                                                      ಡಯಾಲಿಸಿಸ್ ಯಂತ್ರ ಇದ್ದು ಇಲ್ಲದಂತೆ; ಹುನಗುಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳು ಇಲ್ಲದಂತಾಗಿವೆ. ಕಿಡ್ನ ಸಮಸ್ಯೆಯಿಂದ ಬಳಲುತ್ತೀರುವ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಗೆ ಬಂದರೆ ಯಂತ್ರ ಕೆಟ್ಟೋಗಿದೆ ಎಂದು ಹೇಳಿ ಕಳಿಸುವ ವ್ಯವಸ್ಥೆ ಇದೆ ಎಂದು ಶಾಸಕರ ಮುಂದೆ ಸಾರ್ವಜನಿಕರು ಹೇಳಿದಾಗ ಅಲ್ಲಿನ ವೈಧ್ಯರು ಒಂದು ಯಂತ್ರ ಸುಟ್ಟು ಹೋಗಿದೆ ಇನ್ನೊಂದು ಯಂತ್ರ ಕಾರ್ಯ ನಿರ್ವಹಿಸುತ್ತಿದೆ ಎಂದಾಗ ಶಾಸಕರು ಡಯಾಲಿಸಿಸ್ ಯಂತ್ರಗಳ ನಿತ್ಯ ವರದಿಯನ್ನು ಕೊಡಿ ಯಾವುದು ಬಂದ್ ಇದೆ ಯಾವ ಏಜೆನ್ಸಿದು ಅದರ ಸಂಪೂರ್ಣ ಮಾಹಿತಿ ನೀಡಿ ಆ ಏಜೆನ್ಸಿಯ ಲೈಸನ್ಸ್ ಬ್ಲಾಕ್ ಲಿಸ್ಟ್‍ಗೆ ಸೇರಿಸುವ ವ್ಯವಸ್ಥೆ ಮಾಡೋಣ. 

ದೊಡ್ಡನಗೌಡ ಪಾಟೀಲ ಶಾಸಕ.

ಸುದ್ದಿ ಓದಿ