ಬಳ್ಳಾರಿ

ಕೊರೊನಾ ಲಸಿಕಾ ಜಾಗೃತಿ ಜಾಥಕ್ಕೆ ಚಾಲನೆ

ಕೊರೊನಾ ಲಸಿಕಾ ಜಾಗೃತಿ ಜಾಥಕ್ಕೆ ಚಾಲನೆ

ಲೋಕದರ್ಶನ ವರದಿ 

ಕಂಪ್ಲಿ 23: ಪ್ರತಿಯೊಬ್ಬರು ಕಡ್ಡಾಯ ಕೊರೊನಾ ಲಸಿಕೆ ಪಡೆಯುವಲ್ಲಿ ಸ್ವಯಂ ಆಸಕ್ತಿ ತೋರಬೇಕು ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು.  


ಪಟ್ಟಣದಲ್ಲಿ ಶುಕ್ರವಾರ ಕೊರೊನಾ ಲಸಿಕಾ ಜಾಗೃತಿ ಜಾಥಕ್ಕೆ ಚಾಲನೆ ನೀಡಿ, ಕೊರೊನಾ ಲಸಿಕಾ ಮೇಳ ಹಿನ್ನಲೆಯಲ್ಲಿ ಮೂರು ಸಾವಿರ ಲಸಿಕೆ ಗುರಿ ಹೊಂದಿದ್ದು, ನಿಗದಿತ ಗುರಿ ಸಾಧಿಸಲಾಗುವುದು. ಕೊರೊನಾ ಲಸಿಕೆಯಿಂದ ನಿತ್ಯದ ಸಹಜ ಬದುಕಿಗೆ ತೊಂದರೆಯಾಗದು. ಧೈರ್ಯದಿಂದ ಲಸಿಕೆ ಪಡೆಯುವಲ್ಲಿ ಮುಂದಾಗಬೇಕು ಎಂದು ಹೇಳಿದರು.ಕರೊನಾ ಲಸಿಕಾ ಜಾಗೃತಿ ಜಾಥ ಪಟ್ಟಣದ ಹಕ್ಕಿ ಪಿಕ್ಕಿ  ಕಾಲನಿ ಸೇರಿ ಪಟ್ಟಣದಾದ್ಯಂತ ಸಂಚರಿಸಿ, ಸಾರ್ವಜನಿಕರಿಗೆ ಕರೊನಾ ಲಸಿಕೆ ನೀಡಲಾಯಿತು. ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಪಿಎಸ್ ಐ ವಿರುಪಾಕ್ಷಪ್ಪ, ಫುರಸಭೆ ಮುಖ್ಯಾಧಿಕಾರಿ ಎನ್‌. ಶಿವಲಿಂಗಪ್ಪ, ಹಿರಿಯ ಆರೋಗ್ಯ ನೀರೀಕ್ಷಕ ಪ್ರಕಾಶ್ ಬಾಬು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಧಿಕಾ, ಆರೋಗ್ಯ ನೀರೀಕ್ಷಣಾಧಿಕಾರಿ ಚನ್ನಬಸವರಾಜ, ಕಂದಾಯ, ಆರೋಗ್ಯ, ಪುರಸಭೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿದ್ದರು. 


ಸುದ್ದಿ ಓದಿ