ಸಿರುಗುಪ್ಪ

ಕೊರೊನಾ ಲಸಿಕಾ ಜಾಗೃತಿ ಅಭಿಯಾನಕ್ಕೆ ಚಾಲನೆ

ಕೊರೊನಾ ಲಸಿಕಾ ಜಾಗೃತಿ ಅಭಿಯಾನಕ್ಕೆ ಚಾಲನೆ

ಸಿರುಗುಪ್ಪ 23: ನಗರದ 6ನೇ ವಾರ್ಡ್‌ನ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಕೊವಿಡ್‌-19 ಲಸಿಕಾ ಜಾಗೃತಿ ಅಭಿಯಾನಕ್ಕೆ ನಗರಸಭಾ ಅಧ್ಯಕ್ಷ ಡಿ ನಾಗರಾಜ್ ಚಾಲನೆ ನೀಡಿ ಮಾತನಾಡುತ್ತಾ ಕರೋನಾ ನಿಯಂತ್ರಣಕ್ಕಾಗಿ ಸರ್ಕಾರ ಉಚಿತವಾಗಿ ನೀಡುತ್ತಿರುವ ಲಸಿಕಾ ಅಭಿಯಾನದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದರು. ನಗರಸಭಾ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ ಆರೋಗ್ಯದ ಬಗ್ಗೆ ಎಚ್ಚರ ಇರಲಿ ಸ್ವಚ್ಛತೆಗೆ ಕೈ ಕಾಲು ಮುಖ ಆಗಾಗ್ಗೆ ತೊಳಿಯಿರಿ ಮಾಸ್ಕ್‌ ಧರಿಸಿರಿ ಪರಸ್ಪರ ಅಂತರ ಪಾಲಿಸಿರಿ ಎಂದರು ಸಮಾಜ ಕಾರ್ಯಕರ್ತ ಎ ಮೊಹಮ್ಮದ್ ನೌಶಾದ್ ಅಲಿ ಅಂಗನವಾಡಿ ಕಾರ್ಯಕರ್ತೆ ದುರ್ಗಾ ಭವಾನಿ ಸಹಾಯಕಿ ಶಕುಂತಲಾ ಆರೋಗ್ಯ ವರ್ಗದ ಸಿಬ್ಬಂದಿ ಗಳಿದ್ದು ನಗರದ ಎಲ್ಲಾ ವಾರ್ಡುಗಳ ಸದಸ್ಯರು ಕೊರೊನಾ ಲಸಿಕಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಲಸಿಕೆಯನ್ನು ಹಾಕಿಸುವುದರೊಂದಿಗೆ ಕೊರೊನಾ ಮುಕ್ತ ಭಾರತವನ್ನಾಗಿಸಬೇಕು ಎಂದರು. 


ಸುದ್ದಿ ಓದಿ