ಉಚಿತ ಆಂಬುಲೆನ್ಸ್ ಸಂಚಾರಕ್ಕೆ ಚಾಲನೆ
ಮುಂಡಗೋಡ: ಮಾಜಿ ಸಚಿವ ಆರ್.ವಿ ದೇಶಪಾಂಡೆ ಹಾಗೂ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಶುಕ್ರವಾರ ಕೋವಿಡ್ ಸೋಂಕಿತರ ಸಹಾಯಕ್ಕಾಗಿ ತಾಲೂಕು ಬ್ಲಾಕ್ ಕಾಂಗ್ರೆಸ್ನಿಂದ ಉಚಿತ ಆಂಬುಲೆನ್ಸ್ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀಮಣ್ಣ ನಾಯ್ಕ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ ದೊಡ್ಡೂರ, ಜಿ.ಪಂ ಸದಸ್ಯ ಬಸವರಾಜ ದೊಡ್ಮನಿ, ಧರ್ಮರಾಜ ನಡಗೇರ, ಎಮ್.ಎನ್ ದುಂಡಸಿ, ಎಚ್.ಎಮ್ ನಾಯ್ಕ, ರಾಮಕೃಷ್ಣ ಮೂಲಿಮನಿ, ಗೌಸ ಮಖಾನದಾರ ಶಾರದಾ ರಾಥೋಡ, ಅಲಿಹಸನ ಬೆಂಡಿಗೇರಿ, ಜಾಫರ್ ಹಂಡಿ, ಮಲ್ಲಿಕಾರ್ಜುನ ಗೌಳಿ, ರಾಜು ಭೋವಿ, ರಜಾಕ್ ಎಮ್.ಕೆ, ಗೋಪಾಲ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.