ಬಳ್ಳಾರಿ

ಬಾದನಹಟ್ಟಿಯಲ್ಲಿ ರೈತ ಬಂಧು ಅಭಿಯಾನಕ್ಕೆ ಚಾಲನೆ

ಬಾದನಹಟ್ಟಿಯಲ್ಲಿ ರೈತ ಬಂಧು ಅಭಿಯಾನಕ್ಕೆ ಚಾಲನೆ

ಬಳ್ಳಾರಿ 11: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೋಳೂರು ಮತ್ತು ಕುರುಗೋಡು ಹೋಬಳಿ ಮಟ್ಟದ ರೈತ ಬಂಧು ಅಭಿಯಾನ ಕಾರ್ಯಕ್ರಮವು ಬಾದನಹಟ್ಟಿ ಗ್ರಾಮದ ಉಡುಸಲಮ್ಮ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆಯಿತು. 

ಕುರುಗೋಡು ತಾಪಂ ನರೇಗಾ ಸಹಾಯಕ ನಿರ್ದೇಶಕ ಶಿವರಾಮರೆಡ್ಡಿ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. 

ನಂತರ ಮಾತನಾಡಿದ ಅವರು, ಎರೆಹುಳು ಗೊಬ್ಬರ ತಯಾರಿಕೆ ಉತ್ತೇಜಿಸುವ ದೃಷ್ಟಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಆ.15 ರಿಂದ ಅಕ್ಟೋಬರ್ 15 ರವರಗೆ 2 ತಿಂಗಳ ಅವಧಿಯಲ್ಲಿ ಕುರುಗೋಡು ತಾಲೂಕು ಪಂಚಾಯತಿಯು ಕೃಷಿ ಇಲಾಖೆಯ ಸಹಯೋಗದಲ್ಲಿ ಕುರುಗೋಡು ತಾಲೂಕಿನ 12 ಗ್ರಾಪಂ ವ್ಯಾಪ್ತಿಯಲ್ಲಿ ರೈತ ಬಂಧು ಅಭಿಯಾನ  ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ 50 ಎರೆಹುಳು ತೊಟ್ಟಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು. 

ಎರೆಹುಳು ತೊಟ್ಟಿ ನಿರ್ಮಾಣದಲ್ಲಿ ಆಸಕ್ತಿ ಇರುವ ರೈತರು ನಿಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ ಅಥವಾ ಕಾಯಕ ಮಿತ್ರ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಅದರ ಮೂಲಕ ಅರ್ಜಿ ಸಲ್ಲಿಸಬಹುದು. 

 ಈ ಸಂದರ್ಭದಲ್ಲಿ ಬಾದನಹಟ್ಟಿ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ, ಉಪಾಧ್ಯಕ್ಷ ಗಾದಿಲಿಂಗಪ್ಪ, ಪ್ರೋಬೆಷನರಿ ತಹಸೀಲ್ದಾರ್ ಪೂರ್ಣಿಕಾ, ಕಲ್ಲುಕಂಭ, ಓರ್ವಾಯಿ, ಯರಂಗಳಿಗಿ, ಸಿದ್ಧಮ್ಮನಹಳ್ಳಿ, ಹೆಚ್‌.ವೀರಾಪುರ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರಾ.ಉ), ತೋಟಗಾರಿಕೆ ಇಲಾಖೆ, ಪಶುಸಂಗೋಪನ ಇಲಾಖೆಯ ಅಧಿಕಾರಿಗಳು ಪಿಡಿಓ, ಟಿಐಇಸಿ, ಮೇಟಿಗಳು, ಸ್ವಸಹಾಯ ಸಂಘದ ಸದಸ್ಯರು ಮತ್ತು ಇತರರು ಇದ್ದರು. 

ಸುದ್ದಿ ಓದಿ