ಬಳ್ಳಾರಿ

ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

ಬಳ್ಳಾರಿ 02: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 02ರಂದು ಮಹಾವಿದ್ಯಾಲಯದ ಸಿಬ್ಬಂದಿ, 18ವರ್ಷ ಮೇಲ್ಪಟ್ಟ ವಿಧ್ಯಾರ್ಥಿವರ್ಗದವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಳ್ಯಾಣ ಇಲಾಖೆ, ವಿಮ್ಸ್‌,ಬಳ್ಳಾರಿ ಇವರ ಸಹಯೋಗದೊಂದಿಗೆ ಕೋವಿಡ್ ಲಸಿಕೆಯನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  

ವೀ.ವಿ.ಸಂಘದ ಅಧ್ಯಕ್ಷ ಗುರುಸಿದ್ದಸ್ವಾಮಿ, ಮಾತನಾಡುತ್ತಾ ರಾವ್ ಬಹದ್ದೂರ್ ವೈ ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದ ಮಕ್ಕಳಿಗೆ, ಉಪಾದ್ಯಾಯ ಮಿತ್ರರಿಗೆ ಕೊರೋನಾ ಲಸಿಕೆ ನೀಡುವುದರಿಂದ, ಯಾವುದೇ ಸಂಶಯವಿಲ್ಲದೇ ಧೈರ್ಯವಾಗಿ ನಿಮ್ಮ ದಿನನಿತ್ಯ ಕಾರ್ಯಕ್ರಮಗಳು ಮುಂದುವರಿಸಲು ಅನುಕೂಲವಾಗುತ್ತದೆ. ಎಲ್ಲರು ಆರೋಗ್ಯವಾಗಿರಬೇಕು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ, ಪೋಷಕರಿಗೆ, ಶುಭವಾಗಲಿ ಎಂದು ನುಡಿದರು. 

ಕಾರ್ಯದರ್ಶಿ ಬಿ.ವಿ. ಬಸವರಾಜ್ ಮಾತನಾಡುತ್ತಾ ಈ  ಸಮಾಜಹಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಸಿಕೇ ಹಾಕಿಸಿಕೊಳ್ಳುವುದರಿಂದ ಮಾನಸಿಕವಾಗಿ, ಕುಟುಂಬದ ಸದಸ್ಯರಿಗೆ, ಪ್ರೊತ್ಸಾಹ ನೀಡಬೇಕು, ಹಾಗು ನಿಮ್ಮ ವಿಧ್ಯಾಭ್ಯಾಸ, ಪರೀಕ್ಷೆಗಳಿಗೆ ತಯಾರಿಮಾಡಿಕೊಳ್ಳಬೇಕು ಎಂದು ಹೇಳಿದರು. 

ಈ ಕಾರ್ಯಕ್ರಮವನ್ನು ವೀ.ವಿ.ಸಂಘದ ನೂತನ ಪದಾದಿಕಾರಿ ವೀ.ವಿ.ಸಂಘದ ಅಧ್ಯಕ್ಷ ಗುರುಸಿದ್ದಸ್ವಾಮಿ, ಕಾರ್ಯದಶಿ ಬಿ.ವಿ. ಬಸವರಾಜ್, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು ಇವರುಗಳು, ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಳ್ಯಾಣ ಇಲಾಖೆ ವತಿಯಿಂದ ಡಾ. ಜನಾರ್ದನ್, ಡಾ. ನರಸಿಂಹ ಮೂರ್ತಿ,  ಡಾ. ತಾಹಿರಾ,  ಡಾ. ಕಮರ್ತಜ್ , ಹಾಗು  ಪ್ರಾಂಶುಪಾಲ ಡಾ. ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ. ಸವಿತಾ ಸೊನೋಳಿ, ಮಹಾವಿದ್ಯಾಲಯದ - ಲೀಡ್,ಎನ್‌.ಎಸ್‌.ಎಸ್‌., ರೆಡ್‌ಕ್ರಾಸ್‌-ವಿಭಾಗಗಳು, ಹಾಗು ಅವುಗಳ ಸಂಯೋಜಕರಾದ ಡಾ. ಚಿದಾನಂದ,. ಹೆಚ್‌.ವಿರೂಪಾಕ್ಷ ಗೌಡರು, ಸುರೇಶ್, ಮತ್ತು ತಂಡಗಳು ವಿಮ್ಸ್‌,ಬಳ್ಳಾರಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. 


ಸುದ್ದಿ ಓದಿ