ಬಳ್ಳಾರಿ

ಸಮಗ್ರ ಕೃಷಿ ಅಭಿಯಾನಕ್ಕೆ ಶಾಸಕ ಸೋಮಶೇಖರ್ ರೆಡ್ಡಿ ಅವರಿಂದ ಚಾಲನೆ

ಸಮಗ್ರ ಕೃಷಿ ಅಭಿಯಾನಕ್ಕೆ ಶಾಸಕ ಸೋಮಶೇಖರ್ ರೆಡ್ಡಿ ಅವರಿಂದ ಚಾಲನೆ

ಬಳ್ಳಾರಿ 08: 2021-22ನೇ ಸಾಲಿನ ಬಳ್ಳಾರಿ ತಾಲೂಕಿನ ಬಳ್ಳಾರಿ ಹೋಬಳಿ ಸಮಗ್ರ ಕೃಷಿ ಅಭಿಯಾನದ ರಥಕ್ಕೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ನಗರದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಬಾವುಟ ಹಾರಿಸುವುದರ ಮೂಲಕ ಗುರುವಾರ ಚಾಲನೆ ನೀಡಿದರು. 

ಇದೇ ಸಂದರ್ಭದಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಕೃಷಿ ಇಲಾಖೆಯಿಂದ ರೈತರಿಗೆ ಸಹಾಯದನದಲ್ಲಿ ದೊರೆಯುವ ಸೌಲಭ್ಯಗಳಾದ ಸ್ಪೆಯರ್, ವಾಟರ್ ಪೈಪ್(3 ಇಂಚು), ತೊಗರಿ, ಭತ್ತ ಮತ್ತು ಇತರೆ ಪರಿಕರಗಳನ್ನು ವಿತರಿಸಿದರು. 

ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ಕೃಷಿ ಸಂಜೀವಿನಿ ವಾಹನದ ಉದ್ದೇಶಗಳು ಮತ್ತು ವಾಹನದಲ್ಲಿ ವಿಶ್ಲೇಷಿಸಲಾಗುವ ಮಣ್ಣು ರಸಗೊಬ್ಬರ, ಬಿಟಿ ಹತ್ತಿ ಇನ್ನೀತರೆ ವಿಷಯ ಕುರಿತು ಈ ಸಂದರ್ಭದಲ್ಲಿ ವಿವರಿಸಿದರು. 

ಉಪಕೃಷಿ ನಿರ್ದೇಶಕ ಸಿ.ಆರ್‌.ಚಂದ್ರಶೇಖರ್, ಸಹಾಯಕ ಕೃಷಿ ನಿರ್ದೇಶಕರಾದ ಬಿ.ಆರ್‌.ಪಾಲಾಕ್ಷ, ಶಾಂತಲಾ, ಕೃಷಿ ಅಧಿಕಾರಿಗಳಾದ ಸೋಮಶೇಖರ, ಗವಿಸಿದ್ದಪ್ಪ, ಸಂತೋಷ್ ಕುಮಾರ್, ಕವಿತಾ, ರೇಣುಕಾ ಆರಾಧ್ಯ ಮತ್ತು ಇತರೆ ಅಧಿಕಾರಿಗಳು ಹಾಗೂ ತಾಲೂಕಿನ ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ