1.50 ಕೋಟಿ ರೂ.ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ
ಮುಂಡರಗಿ 22: ಪ್ರಸಕ್ತ ಸಾಲಿಯಲ್ಲಿ ರಾಜ್ಯದಾಧ್ಯಂತಹ ಮಳೆ ಹೆಚ್ಚಾಗಿದ್ದು, ಅದರಿಂದ ರಾಜ್ಯದಲ್ಲಿ ಹಾಗೂ ಶಿರಹಟ್ಟಿ ಕ್ಷೇತ್ರದಲ್ಲಿಯು ಬಹುತೇಕ ರಸ್ತೆಗಳು ಕಿತ್ತು ಹೊಗಿದ್ದು ಒಂದು ಕಡೆ ಕೋವಿಡ್, ಇನ್ನೊಂದು ಕಡೆ ಮಳೆ ಹೆಚ್ಚಳ ಇದರಿಂದ ಸರಕಾರವು ಹಾಗೂ ರಾಜ್ಯದ ಸಾರ್ವಜನಿಕರು, ರೈತರು, ಕೃಷಿ ಕಾರ್ಮಿಕರು ಅಪಾರ ಸಂಕಷ್ಟವನ್ನು ಎದರುಸಿದ್ದು ಅದರಲ್ಲಿಯೇ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಿ.ಜೆ.ಪಿ ಸರಕಾರವು ಪ್ರಾಮುಖ್ಯತೆ ನೀಡುತ್ತದೆ ಎಂದು ಶಿರಹಟ್ಟಿ ಕ್ಷೇತ್ರದ ಶಾಸಕರಾದ ರಾಮಣ್ಣ ಲಮಾಣಿ ಹೇಳಿದರು.
ತಾಲೂಕಿನ ಬಾಗೇವಾಡಿಯಿಂದ ಜ್ಯಾಲವಾಡಿ ಗ್ರಾಮದ ಸಂಪರ್ಕಿಸುವ ಲೋಕೋಪಯೋಗಿ ಇಲಾಕೆಯ ರಸ್ತೆಯ 1.50 ಕೋಟಿ ರೂ.ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳು ಈ ವರ್ಷದ ಮಳೆಯ ಹೊಡೆತಕ್ಕೆ ನಾಶವಾಗಿದ್ದು, ಮುಂದಿನ ದಿನಮಾನಗಳಲ್ಲಿ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡೆಸುವದಕ್ಕೆ ಸರಕಾರದ ಮೇಲೆ ಒತ್ತಡ ತರುವದರ ಮೂಲಕ ಅನುದಾನ ತರುತ್ತೆನೆ, ರಾಜ್ಯದ ಮುಖ್ಯಮಂತ್ರಿಗಲಾದ ಬಸವರಾಜ ಬೋಮ್ಮಾಯಿಯವರು ಶಿರಹಟ್ಟಿ ಕ್ಷೇತ್ರದ ಅಭಿವೃದ್ಧಿ ಪರ ಯೋಜನೆಗೆ ಅನುದಾನ ನೀಡುವದಕ್ಕೆ ಆಶ್ವಾಸನೆ ನೀಡಿದ್ದು, ಆದ್ದರಿಂದ ಕ್ಷೇತ್ರದ ಸಾರ್ವಜನಿಕರು ನನಗೆ ಸಹಕಾರ ನೀಡಬೇಕು ಹಾಗೂ ಗುತ್ತಿಗೇದಾರರು ಕಾಮಗಾರಿಗಳನ್ನು ಉತ್ತಮ ಗುಣ ಮಟ್ಟದಲ್ಲಿ ಕೆಲಸ ಮಾಡಬೇಕು ಹಾಗೂ ಅವಧಿಯೊಳಗೆ ಮುಗಿಸಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಬಾಗೇವಾಡಿ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಪಾಟೀಲ, ಉಪಾಧ್ಯಕ್ಷರಾದ ಹೇಮಂತಗೌಡ ಪಾಟೀಲ, ಮುಖಂಡರಾದ ಕರಬಸಪ್ಪ ಹಂಚನಾಳ, ಕುಮಾರಸ್ವಾಮಿ ಹಿರೇಮಠ, ರಮೇಶ ಹುಳಕಣ್ಣನವರ, ಶಿದೇಶಪ್ಪ ತಳವಾರ, ದೇವಪ್ಪ ಹವಳದ, ಶ್ರೀಮತಿ ಶೋಭಾ ಪಾಟೀಲ, ಶ್ರೀಮತಿ ತಿಪ್ಪವ್ವ ತಳವಾರ, ದ್ಯಾಮಪ್ಪ ಮಳ್ಳೂರು, ಮಲ್ಲಿಕಾರ್ಜುನ ಹಣಜಿ, ರಾಮಣ್ಣ ಬಂಡಿವಡ್ಡರ, ದೇವಪ್ಪ ಹಾಡದವರ, ಶ್ರೀಮತಿ ರೇಣವ್ವ ಲಮಾಣಿ, ರಾಮನಗೌಡ ಪಾಟೀಲ, ಗವಿಶಿದ್ದಯ್ಯ ಡಂಬಳಮಠ, ಕುಮಾರ ತಳವಾರ, ಹನಮಂತ ಚೂರಿ, ಕೈಲಾಸ ಹಿರೇಮಠ, ಪಿ.ಡ್ಬ್ಯೂ.ಡಿ. ಅಧಿಕಾರಿಗಳಾದ ಎಸ್.ಎಸ್. ಹಿತ್ತಳಗುತ್ತಿ, ಮಲ್ಲಿಕಾರ್ಜುನ ಹಿರೇಮನಿ, ಲಕ್ಷ್ಮಣ್ಣ ಲಮಾಣಿ, ಹಾಗೂ ಬಾಗೇವಾಡಿ ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು, ಮತ್ತು ಬಿ.ಜೆ.ಪಿ. ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.