20 ಆಕ್ಸಿಜನ್ ಬೆಡ್‌ಗಳ ಆಸ್ಪತ್ರೆಗೆ ಶಾಸಕ ಭೀಮಾನಾಯ್ಕ್ ಚಾಲನೆ
ಹಗರಿಬೊಮ್ಮನಹಳ್ಳಿ 17: ಪಟ್ಟಣದ ನೂರು ಹಾಸಿಗೆ ಆಸ್ಪತ್ರೆಗೆ 20 ಆಕ್ಸಿಜನ್ ಬೆಡ್‌ಗಳಿಗೆ ಶಾಸಕ ಎಸ್.ಭೀಮಾನಾಯ್ಕ್ ಚಾಲನೆ ನೀಡಿ, ಬೆಡ್‌ಗಳಿಗನ್ವಯ 20ಜಂಬೊ ಸಿಲಿಂಡರ್‌ಗಳನ್ನು ಸ್ವಂತ ಖರ್ಚಿನಲ್ಲಿ ನೀಡಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ 30ಬೆಡ್‌ಗಳಿದ್ದು,ಇನ್ನುಳಿದಂತೆ 5ಬೆಡ್‌ಗಳನ್ನು ವ್ಯೆವಸ್ಥಿತ ರೂಪದಲ್ಲಿ ಮಾರ್ಾಡು ಮಾಡಲಗಿತ್ತು ಇಂದು 20 ಅಕ್ಸಿಜನ್ ಬೆಡ್‌ಗಳಿಂದ ಒಟ್ಟು 50ಬೆಡ್‌ಗಳನ್ನು ಆಕ್ಸಿಜನ್ ಬೆಡ್ ಲಭ್ಯವಿದೆ,ಹಾಗೂ ವರಲಹಳ್ಳಿ,ಹಂಪಾಪಟ್ಟಣ ಬಳಿಯ ವಸತಿ ನಿಲಯದಲ್ಲಿಯೋ 100ರಂತೆ 200 ಬೆಡ್‌ಗಳ ಕೇರ್ ಸೆಂಟರ್ ರೂಪಿಸುವ ಕಾರ್ಯ ನಡೆಯುತ್ತಿದೆ ಅದರಲ್ಲಿ ವರಲಹಳ್ಳಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 50 ಬೆಡ್‌ಗಳನ್ನು ಆಕ್ಸಿಸಜನ್ ಬೆಡ್ ಮಾಡುವ ಭರವಸೆಯನ್ನು ನೀಡಿದರು.
50ಫ್ಲೂ ಮೀಟರ್ : ಒಂದು ಆಕ್ಸಿಜನ್ ಸಿಲಿಂಡರ್‌ಗೆ ಒಂದು ಫ್ಲೂ ಮೀಟರ್ ಅವಶ್ಯಕವಿದ್ದು 50 ಫ್ಲೂ ಮೀಟರ್‌ಗಳನ್ನು ನೀಡುವುದಗಿಒ ಶಸಕರು ಭರವಸೆಯನ್ನು ನೀಡಿದರು.
ಜಿಲ್ಲಾ ಉಸ್ತವಾರಿ ಮಂತ್ರಿಗಳಿಗೆ ಭೇಟಿ : ಕ್ಷೇತ್ರದಲ್ಲಿನ ಹತ್ತಾರು ಗ್ರಾಮಗಳಲ್ಲಿ ಕರೋನಾ ಅಟ್ಟಹಾಸ ವಿಪರೀತವಾಗಿದ್ದು,ಸಮೀಪದ ತಂಬ್ರಹಳ್ಳಿ ಗ್ರಾಮದಲ್ಲಿ ಸಾವಿನ ಸಂಖ್ಯೆ 10ಕ್ಕೇರಿದ್ದು ಗ್ರಾಮಸ್ಥರು ಸ್ವಯಂ ಸೀಲ್‌ಡೌನ್ ಮಾಡಿಕೊಂಡಿರುವುದು ಆಂತಕ ಸೃಷ್ಟಿಮಾಡಿದೆ,ಇನ್ನು ಪಟ್ಟಣದಲ್ಲಿ ದಿನನಿತ್ಯವೂ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಂಬಂಧ ಜಿಲ್ಲಾ ಉಸ್ತವಾರಿ ಮಂತ್ರಿಗಳ ಜೊತೆ ದೂರವಾಣಿಯಲ್ಲಿ ಮತನಾಡಿದ್ದೆನೆ,ರೆಮ್ಡಿಸಿವೆರ್ ಲಸಿಕೆ 180 ಬೇಕಿದೆ ಅದರಲ್ಲಿ 50 ಬಂದಿದೆ ಕೂಡಲೆ ಲಸಿಕೆ ನೀಡುವಂತೆ ತಿಳಿಸಿದ್ದೇನೆ,ರಾ್ಯಪಿಡ್ ಟೆಸ್ಟಿಂಗ್ ಕಿಟ್ ಅವಶ್ಯಕತೆಗೆ ಮಂತ್ರಿಗಳು ಸಂಭಂಧಿಸಿದ ಅಧಿಕಾರಿಗಳ ಜೊತೆ ಮಾತನಾಡುವ ಭರವಸೆಯನ್ನು ನೀಡಿದ್ದಾರೆ,
ನಕಲಿ ವೈದ್ಯರ ವಿರುಧ್ಧ ಕಾನೂನು ಕ್ರಮ : ಗ್ರಾಮೀಣ ಭಾಗದಲ್ಲಿ ನಕಲಿ ವೈದ್ಯರ ಹಾವಳಿಯಿಂದ ಸೊಂಕಿತರಿಗೆ ದಿಕ್ಕುತಪ್ಪಿಸುವ ತಪ್ಪಿಸುವ ಕಾರ್ಯ ನಡೆಯುತ್ತಿದೆ, ಕೋವಿಡ್ ಟೆಸ್ಟ್ ಮಾಡಿಸದೆ ಸಮಾನ್ಯ ಟ್ರೀಟ್‌ಮೆಂಟ್ ನೀಡುತ್ತ ಜ್ಷರ ಕಡಿಮೆಯಾಗದಿದ್ದಾಗ, ಸೊಂಕಿತ ತಾಲೂಕಾಸ್ಪತ್ರೆಗೆ ಬರುವಷ್ಟರಲ್ಲಿ ವೈರಸ್ ಸಾವಿನ ದವಡೆಗೆ ತಳ್ಳಿರುತ್ತದೆ ಇಂತಹ ಸ್ಟೇಜ್ ಮೀರಿದ ಸೊಂಕಿತರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಆಘಾಕಾರಿ ಸಂಗತಿಯಾಗಿದೆ ಹಾಗಾಗಿ ನಕಲಿ ವೈದ್ಯರ ವಿರುಧ್ಧ ತಹಶಿಲ್ದಾರರು ಈಗಾಗಲೆ ಕಾನೂನು ಸಮರ ಸಾರಿ ಕಠಿಣ ಕ್ರಮ ಜರುಗಿಸುವಲ್ಲಿ ತಹಶಿಲ್ದಾರ್ ಮುಂದಗಿರುವುದು ಕಾಣಬಹುದಗಿದೆ ಎಂದರು.
ಹ.ಬೂ.ಹಳ್ಳಿ ಯಲ್ಲಿ 100,ಕೊಟ್ಟೂರಿನ ಕಂದಗಲ್‌ನಲ್ಲಿ 50 ಆಕ್ಸಿಜನ್ ಬೆಡ್‌ಗಳು,150ಅಬ್ಜರ್‌ವೇಶನ್ ಬೆಡ್‌ಗಳ ಬೇಡಿಕೆ ಜಿಲ್ಲಾ ಮಂತ್ರಿಗಳಿಗೆ ಸಲ್ಲಿಸಲಾಗಿದೆ ಕೆಲವೇ ದಿನಗಳಲ್ಲಿ ಈ ಕಾರ್ಯ ಸಂಪೂರ್ಣಗೊಳ್ಳಲಿದೆ.ಪಟ್ಟಣ ಹೊರವಲಯದಲ್ಲಿ ಸ್ಥಳ ಗುರುತಿಸಿ 200 ಬೆಡ್‌ಗಳ ಆಸ್ಪತೆಯ ಅನುಮೋದನೆಯನ್ನು ಕರ್ಯರೂಪಕ್ಕೆ ತರುವ ಪ್ರಯತ್ನವು ನಡೆಯುತ್ತಿದೆ,ಹೆರಿಗೆ ಆಸ್ಪತ್ರೆಯನ್ನು ಶೀಘ್ರವೆ ರೂಪಿಸಲು ಮುಂದಗುವೆ ಎಂದರು.
ಶುಕ್ರವಾರದಿಂದ ಸಂಪೂರ್ಣ ಪಟ್ಟಣ ಸೀಲ್‌ಡೌನ್ : ದಿನದಿಂದ ದಿನಕ್ಕೆ ಸೊಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಪಟ್ಟಣವನ್ನು ಸಂಪೂರ್ಣ ಸೀಲ್‌ಡೌನ್ ಮಾಡುವುದಕ್ಕೆ ವರ್ತಕರು ಒಪ್ಪಿಗೆ ಸೂಚಿಸಿದ್ದು ಶುಕ್ರವಾರದಿಂದ ನಗರ ಸಂಪೂರ್ಣ ಸೀಲ್‌ಡೌನ್ ಮಾಡಲಾಗುವುದು, ಅಗತ್ಯ ವಸ್ತಗಳ ಖರೀದಿಯನ್ನು ಶುಕ್ರವಾರದೊಳಗೆ ಮಾಡಿಕೊಳ್ಳುವಂತೆ ಶಾಸಕ ಭೀಮಾನಾಯ್ಕ್ ಸಾರ್ವಜನಿಕರಿಗೆ ಕರೆ ನೀಡಿದರು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ,ಅನಗತ್ಯ ಒಡಾಟ ಮಾಡದಂತೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ತಹಶಿಲ್ದಾರ್ ಶರಣಮ್ಮ,ಇಒ ಹಾಲಸಿದ್ದಪ್ಪ ಪೂಜಾರ, ಟಿಹೆಚ್‌ಒ ಶಿವರಾಜ್,ಮುಖ್ಯವೈದ್ಯಾಧಿಕಾರಿ ಶಂಕರ್‌ನಾಯ್ಕ್,ಬಿಇಒ ಶೇಖರ್ಪ ಹೊರಪೇಟೆ,ಎಇಇ ಫ್ರಭಾಕರ ಶೆಟ್ಟಿ,ತೋಟಗಾರಿಕಾಇಲಾಖಾ ನಿರ್ದೇಶಕ ಪರಮೇಶ್ವರ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.