ಬಳ್ಳಾರಿ

ಕಾರ್ಪೊರೇಟ್ಗ ಕಂಪನಿ ಗ ಳನ್ನು ಓಡಿಸಿ, ಕೃಷಿಯನ್ನು ಉಳಿಸಿ: ಪ್ರತಿಭಟನೆ

ಕಾರ್ಪೊರೇಟ್ಗ ಕಂಪನಿ ಗ ಳನ್ನು ಓಡಿಸಿ, ಕೃಷಿಯನ್ನು ಉಳಿಸಿ: ಪ್ರತಿಭಟನೆ

ಬಳ್ಳಾರಿ 05: ಕಳೆದ ವರ್ಷ 2021ರ ಜೂನ್ 5ರಂದು ಬಿಜೆಪಿಯ ಮೋದಿ ಸಕರ್ಾರವು ಕೃಷಿಯ, ರೈತರ ಹಾಗೂ ದೇಶದ ಜನಸಾಮಾನ್ಯರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಹಠಾತ್ತಾಗಿ ಮೂರು ಸುಗ್ರೀವಾಜ್ಞೆಗಳನ್ನು ತಂದಿತು. ಈ ಕಾಯ್ದೆಗಳ ವಿರುದ್ಧ ನಾವೆಲ್ಲ ಒಂದಾಗಿ ಸಂಯುಕ್ತ ಕಿಸಾನ್ ಮೋಚರ್ಾ ಪತಾಕೆಯಡಿ ಹೋರಾಡುತ್ತಿದ್ದೇವೆ ಎಂದು ಆರ್ಕೆಎಸ್ ಜಿಲ್ಲಾ ಕಾಂರ್ಯದಶರ್ಿ ಇ.ಹನುಮಂತಪ್ಪ ಹೇಳಿದರು.ಇಂದು ಆರ್ಕೆಎಸ್  ವತಿಯಿಂದ ಕಾಪರ್ೊರೆಟ್ ಕಂಪೆನಿಗಳನ್ನು ಓಡಿಸಿ, ಕೃಷಿಯನ್ನು ಉಳಿಸಿ - ಸಂಪೂರ್ಣ ಕ್ರಾಂತಿ ದಿನ ಅಂಗವಾಗಿ ಬಳ್ಳಾರಿ ಹಾಗೂ ಜಿಲ್ಲೆಯ ಶ್ರೀಧರಗಡ್ಡೆ, ಕೋಳೂರು, ಕೋರ್ಲಗುಂದಿ ಮತ್ತು ವಿವಿಧ ಹಳ್ಳಿಗಳಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿಯ ಮುಂದಿನ ಭಾಗವಾಗಿ ಸಂಯುಕ್ತ ಕಿಸಾನ್ ಮೋಚರ್ಾದ ಅಂಗವಾದ ಆಲ್ ಇಂಡಿಯಾ ಕಿಸಾನ್ ಖೆತ್ ಮಜ್ದೂರ್ ಸಂಘಟನ್ಯು 2021ರ ಜೂನ್ 5 ಸಂಪೂರ್ಣ ಕ್ರಾಂತಿ ದಿನವಾಗಿ ದೇಶದಾದ್ಯಂತ ಆಚರಿಸಲು ಕರೆ ನೀಡಿದರು.ರೈತರಿಗೆ ಮರಣಶಾಸನವಾಗಿರುವ ಮೂರು ಕರಳಾ ಕಾಯ್ದೆಗಳಾದ ಎ.ಪಿ.ಎಮ್.ಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳ ಪ್ರತಿಯನ್ನು ದಹನ ಮಾಡಿ ಕೇಂದ್ರ ಸಕರ್ಾರದ ವಿರುದ್ಧ ರೈತರು ಅಕ್ರೋಶ ವ್ಯಕ್ತ ಪಡಿಸಿದರು. 

ಆರ್ಕೆಎಸ್ ಜಿಲ್ಲಾ ಮುಖಂಡರಾದ ಗೋವಿಂದ್ ಅವರು ಮಾತನಾಡುತ್ತಾ ಜೂನ್ 5 ರಂದು ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಲು ಬಿಜೆಪಿ ಸಕರ್ಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ದೇಶದಾದ್ಯಂತ ರೈತರು ಮೂರು ಕರಾಳ ಕಾಯ್ದೆಗಳನ್ನು ಹಾಗೂ ವಿದ್ಯುತ್ ಕಾಯ್ದೆಗಳನ್ನು ಸುಟ್ಟು ಸಂಪೂರ್ಣ ಕ್ರಾಂತಿ ದಿನದ ಸಂದರ್ಭದಲ್ಲಿ ಕಾಪರ್ೊರೆಟ್ ಕಂಪೆನಿಗಳನ್ನು ಒದ್ದೋಡಿಸಿ-ಕೃಷಿ ಉಳಿಸಿ ಎಂದು ಮರುಪ್ರತಿಜ್ಞೆ ಮಾಡಲು ಸಂಪೂರ್ಣವಾಗಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಆರ್ಕೆಎಸ್ ಜಿಲ್ಲಾ ಸಮಿತಿ ಸದಸ್ಯರಾದ ಬಸಣ್ಣ, ಪಂಪಾಪತಿ ಮತ್ತು ರೈತರು ಭಾಗವಹಿಸಿದ್ದರು.

 

ಸುದ್ದಿ ಓದಿ