ಬಳ್ಳಾರಿ

ವಿನೂತನ ಸ್ವಚ್ಛತಾ ಅಭಿಯಾನಕ್ಕೆ ಶಾಸಕರಿಂದ ಚಾಲನೆ

ವಿನೂತನ ಸ್ವಚ್ಛತಾ ಅಭಿಯಾನಕ್ಕೆ ಶಾಸಕರಿಂದ ಚಾಲನೆ

ಬಳ್ಳಾರಿ: ಕೇಂದ್ರ ಸರ್ಕಾರವು ಸ್ವತ್ಛ ಭಾರತ ಮಿಷನ್  ಯೋಜನೆಯಡಿಯಲ್ಲಿ  ಸ್ವಚ್ಛತಾ ಸರ್ವೇಕ್ಷಣ್ 2022 ಎಂಬ ಯೋಜನೆಯಡಿಯಲ್ಲಿ ನಗರಗಳಿಗೆ ಅಂಕ ನೀಡಲು ಸಮೀಕ್ಷೆ ಪ್ರಾರಂಭ ಮಾಡಲಾಗುತಿದ್ದು,  ನಗರದ  37 ಮತ್ತು 38 ವಾರ್ಡ್ನಲ್ಲಿ  ಬಿಜೆಪಿ ಯುವ ಮುಖಂಡ ವಿ. ಅನೂಪ್ ಕುಮಾರ ಇವರ ನೇತೃತ್ವದಲ್ಲಿ ಆಯೋಜಿಸಿದ್ದ ಆಗಿರಿ ಸ್ವಚ್ಛತಾ ಹೀರೊ (ಃಜ ಚಿ ಖತಿಚಿಛಿಚಿಣಚಿ ಊಜಡಿಡಿಠ) ಎಂಬ ವಿನೂತನ ಸ್ವಚ್ಛತಾ ಅಭಿಯಾನಕ್ಕೆ  ನಗರ ಶಾಸಕ ಜಿ. ಸೋಮಶೇಖರ್ ರೆಡಿ ಅವರು ಮನೆ ಮನೆಗೆ ಕರ ಪತ್ರ ನೀಡಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಚಾಲನೆ ನೀಡಿದರು. 

ನಂತರ ಮಾತನಾಡಿದ ಶಾಸಕರು ನಮ್ಮ ಬಳ್ಳಾರಿ ನಗರ ಸ್ವಚ್ಚತೆ ಯಲ್ಲಿ 352 ನೇ ಸ್ಥಾನದಲ್ಲಿ ಇರುವುದು ನೋವಿನ ಸಂಗತಿ ಯಾಗಿದೆ. ಆದಷ್ಟು ನಾವೇಲ್ಲರೂ ಈ ಸ್ಥಾನವನ್ನು 10ರಿಂದ 15 ನೇ ಸ್ಥಾನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದರು. ನಂತರ ಮಾತನಾಡಿದ ಬಿಜೆಪಿ ಯುವ ಮುಖಂಡ ಅನೂಪ್ ಕುಮಾರ್ ರವರು ನಾವು ಸ್ವಚ್ಛತೆ ಗೆ ಆದ್ಯತೆ ನೀಡಿದರೆ ನಮ್ಮ ಸಿಟಿ 10ನೇ ಸ್ಥಾನಕ್ಕೆ ತರಬಹುದಾಗಿದೆ. ಅದಕ್ಕೆ ಸಾರ್ವಜನಿಕರ ಶ್ರಮ ಬಹಳ ಮುಖ್ಯ ವಾಗಿದೆ.  ಕಸವನ್ನು ಎಲ್ಲಿಂದರಲ್ಲಿ ಎಸೆಯದೆ ಮಹಾನಗರ ಪಾಲಿಕೆಯ ವಾಹನ ಬಂದಾಗ ಕಸವನ್ನು ವಿಂಗಡಣೆ ಮಾಡಿ ಪಾಲಿಕೆ ಮಾಹನಕ್ಕೆ ನೀಡಿದರೆ ನಮ್ಮ ನಗರ ಸುಂದರವಾಗಿಡಲು ಸಹಕಾರಿಯಾಗುತ್ತದೆ ಎಂದರು. ಪ್ಲಾಸ್ಟಿಕ್ ನೀಷೇದ ಮಾಡುವುದರಿಂದ ಸ್ವಚ್ಛತೆ ಯನ್ನು ಕಾಪಾಡಿಕೊಳ್ಳಬಹುದಾಗಿದೆ. ಹಾಗೂ ಸ್ವಚ್ಛತಾ ಮೊಬೈಲ್ ಆಫ್ ಮೂಲಕ ದೂರು ನೀಡಿದರೆ ಪಾಲಿಕೆ ಸಿಬ್ಬಂದಿ ಗಳು ಬಂದು ಕ್ರಮ ವಹಿಸುತ್ತಾರೆ ಎಂದ ಅವರು ಈಗಾಗಲೆ ಸ್ವಚ್ಛ ಸರ್ವೇಕ್ಷಣ್ 2022 ಕಾರ್ಯಕ್ರಮ ಪ್ರಾರಂಭವಾಗಿರುವುದರಿಂದ ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡು ಸಹಕರಿಸಬೇಕಾಗಿದೆ. ಈ ಸಂದರ್ಭದಲ್ಲಿ ವಾರ್ಡಿನ ಬಿಜೆಪಿ ಮುಖಂಡರಾದ ಜಿಲ್ಲಾ ಮಾಧ್ಯಮ ಸಹ ಪ್ರಮುಖರು ರಾಜೀವ್, ಭೀಮಲಿಂಗ, ಪಾಮಯ್ಯ, ಶ್ರೀರಾಮುಲು, ಸುಧಾಕರ್, ಚಂದ್ರು, ಮೋಹನ್, ವೀರೇಶ್, ರಾಜು, ಗೋವಿಂದ, ನಾರಾಯಣ್ ಸಿಂಗ್, ರಮಣ, ನವೀನ್, ಪವನ್, ಅಂಜಿ ಸೇರಿದಂತೆ ಇತರರು ಹಾಜರಿದ್ದರು. 


ಸುದ್ದಿ ಓದಿ