ಹಗರಿಬೊಮ್ಮನಹಳ್ಳಿ

ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ನಿರ್ಮಾಣ

ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ನಿರ್ಮಾಣ

ಹಗರಿಬೊಮ್ಮನಹಳ್ಳಿ 09: ದಿನಗಳೆದಂತೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪಟ್ಟಣದ ಫೋಕಸ್ ಮಾರ್ಟ್ ಬಳಿ ಕನ್ನಡ ಯುವ ಶಕ್ತಿ ವೇದಿಕೆ ಹಾಗೂ ಸ್ವಾಮಿ ವಿವೇಕಾನಂದ ಟ್ರಸ್ಟ್ ವತಿಯಿಂದ ಶುದ್ಧ  ಕುಡಿಯುವ ನೀರಿನ ಅರವಟ್ಟಿಗೆಯನ್ನು ಶುಕ್ರವಾರ ಆರಂಭಿಸಿದರು.

ಈ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯಿಂದ ಸಾರ್ವಜನಿಕರಿಗೆ ಸಹಾಯವಾಗಲಿದೆ, ಬಿರು ಬಿಸಿಲಿನ ತಪಕ್ಕೆ ದಣಿದ ಜೀವಗಳಿಗೆ ನೆರವಗಲೆಂದು ಅರವಟ್ಟಿಗೆಯನ್ನು ನಿರ್ಮಿಸಲಾಗಿದೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂಬುದೆ ಟ್ರಸ್ಟ್ ಹಾಗೂ ಯುವ ಶಕ್ತಿ ವೆದಿಕೆ ಆಶಯವಾಗಿದೆ ಎಂದು ಸರ್ವ ಸದಸ್ಯರು ತಿಳಿಸಿದರು.

ಈ ಸಂಧರ್ಭದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಗಿಡಗಳಿಗೆ ತಮ್ಮ ಸೈಕಲ್‍ನಲ್ಲಿ ಕೊಡಗಳ ಮೂಲಕ ನೀರುಣಿಸುತ್ತಿರುವ ಪರಿಸರ ಪ್ರೇಮಿ ನಾಗಭೂಷಣ ಗೆದ್ದಿಕೇರಿ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಯುವ ಶಕ್ತಿ ವೇದಿಕೆ ಹಾಗೂ ಟ್ರಸ್ಟ್‍ನಿಂದ ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಟ್ರಸ್ಟ್ ಹಾಗೂ ವೇದಿಕೆಯ ಪದಾಧಿಕಾರಿಗಳು ಸರ್ವ ಸದಸ್ಯರುಗಳು ಇದ್ದರು.

ಸುದ್ದಿ ಓದಿ