ಬಳ್ಳಾರಿ

ನಾಟಕಗಳು ನಿಜ ಜೀವನದ ಪ್ರತಿಬಿಂಬ: ಅಂಬರೀಶ್

ನಾಟಕಗಳು ನಿಜ ಜೀವನದ ಪ್ರತಿಬಿಂಬ: ಅಂಬರೀಶ್

ಮರಿಯಮ್ಮನಹಳ್ಳಿ 06: ನಾಟಕಗಳು ನಿಜ ಜೀವನವನ್ನು ಪ್ರತಿಬಿಂಬಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಸಮಾಜ ಸೇವಕ ಅಯ್ಯನಹಳ್ಳಿಯ ಅಂಬರೀಶ್ ಹೇಳಿದರು. 

ನಾರಾಯಣ ದೇವರ ಕೆರೆ ಸಾಂಸ್ಕೃತಿಕ ಕಲಾ ಟ್ರಸ್ಟ್ ಮರಿಯಮ್ಮನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಇವರ ಸಂಯುಕ್ತಾಶ್ರಯದಲ್ಲಿ ಸಮೀಪದ ಡಣಾಪುರ ಗ್ರಾಮದ ಪುಟ್ಟರಾಜ ಗವಾಯಿ ಬಯಲು ರಂಗಮಂದಿರದಲ್ಲಿ ಮಂಗಳವಾರ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. 

ಕಲಾಪೋಷಕರು ಕಲಾವಿದರನ್ನು ಪ್ರೋತ್ಸಾಹಿಸಿದಾಗ ಮಾತ್ರ ನಾಟಕ ಮತ್ತು ರಂಗಭೂಮಿ ಜೀವಂತಿಕೆಯಿಂದ ಇರಲು ಸಾಧ್ಯ ಎಂದರು.  

ನಾರಾಯಣ ದೇವರ ಕೆರೆ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಅಧ್ಯಕ್ಷ ಅಡ್ಡಿಗೆರೆ ದಾದಾಪೀರ ಅಧ್ಯಕ್ಷತೆ ವಹಿಸಿದ್ದರು. ಕರವೇ ಅಧ್ಯಕ್ಷ ರವಿಕುಮಾರ, ಕಲಾ ಪ್ರೋತ್ಸಾಹಕರಾದ ಸಂತೋಷ ಚಂದುಕರ, ಗೌಳೇರ ರಾಘವೇಂದ್ರ, ಉದಯಕುಮಾರ ಹಾಗೂ ಗ್ರಾಮಸ್ಥರು ಉಪಸ್ಥಿತಿ ಇದ್ದರು. ನಂತರ ವಿ.ನಾಗರಾಜ ತಂಡದಿಂದ ಪರಿಶಿಷ್ಟ ಜಾತಿ ಕಾರ್ಯಕ್ರಮ ಅಡಿಯಲ್ಲಿ ಸಾಮ್ರಾಟ ಅಶೋಕ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಯಿತು 

ಸುದ್ದಿ ಓದಿ