ಮುಂದಗೋಡ

ಡಾ.ವೀರೇಂದ್ರ ಹೆಗಡೆ ಜನ್ಮದಿನದ: ಸಸಿ ನೆಡುವ ಕಾರ್ಯಕ್ರಮ

ಡಾ.ವೀರೇಂದ್ರ ಹೆಗಡೆ ಜನ್ಮದಿನದ: ಸಸಿ ನೆಡುವ ಕಾರ್ಯಕ್ರಮ

ಲೋಕದರ್ಶನ ವರದಿ 

ಮುಂಡಗೋಡ:ಪರಮಪೂಜ್ಯ ಡಾ.ವೀರೇಂದ್ರ ಹೆಗಡೆ ಅವರ ಜನ್ಮದಿನದ ಪ್ರಯುಕ್ತ ಇಲ್ಲಿನ ಶೌರ್ಯ ವಿಪತ್ತು ಘಟಕದ ವತಿಯಿಂದ ಪಟ್ಟಣದ ಶ್ರೀಗುರು ಗೋವಿಂದ ಮತ್ತು ಶ್ರೀಸಂತ ಶಿಶುನಾಳ ಶರೀಫರ ಶಿವಯೋಗ ಮಂದಿರದ ಆವರಣದಲ್ಲಿ ಶುಕ್ರವಾರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.   

ಘಟಕದ ಅಧ್ಯಕ್ಷ ಸುಧೀರ ಪಾಟೀಲ, ಸೇವಾ ಪ್ರತಿನಿಧಿಗಳು ಹಾಗೂ ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು ಭಾಗವಹಿಸಿದ್ದರು. ಹನುಮಂತ ಭೋವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ