ಬಳ್ಳಾರಿ

ವಿವಿಯ ನೂತನ ಕುಲಸಚಿವರಾಗಿ ಡಾ.ಎಸ್‌.ಸಿ ಪಾಟೀಲ್ ನೇಮಕ

ವಿವಿಯ ನೂತನ ಕುಲಸಚಿವರಾಗಿ ಡಾ.ಎಸ್‌.ಸಿ ಪಾಟೀಲ್ ನೇಮಕ

ಬಳ್ಳಾರಿ 27: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಸಚಿವ (ಆಡಳಿತ)ರಾಗಿ ಡಾ.ಎಸ್‌.ಸಿ.ಪಾಟೀಲ್ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಶ್ರೀಕೃಷ್ಣದೇವರಾಯ ವಿವಿ ಪ್ರಕಟಣೆ ತಿಳಿಸಿದೆ. 

ಈ ಹಿಂದೆ ಪ್ರಭಾರ ಕಾರ್ಯಭಾರ ವಹಿಸಿಕೊಂಡಿದ್ದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಶಶಿಕಾಂತ್ ಎಸ್‌.ಉಡಿಕೇರಿ ಅವರಿಂದ ಅಧಿಕಾರ ಸ್ವೀಕರಿಸಿದ ಡಾ.ಎಸ್‌.ಸಿ.ಪಾಟೀಲ್ ಅವರು ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಿರ್ವಹಣಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು.  

ಸರಕಾರವು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಕುಲಸಚಿವ (ಆಡಳಿತ) ರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. 


ಸುದ್ದಿ ಓದಿ