ಮುಂದಗೋಡ

ಅಧ್ಯಕ್ಷರಾಗಿ ಡಾ.ರಮೇಶ ಅವಿರೋಧ ಆಯ್ಕೆ

ಅಧ್ಯಕ್ಷರಾಗಿ ಡಾ.ರಮೇಶ ಅವಿರೋಧ ಆಯ್ಕೆ

ಮುಂಡಗೋಡ:ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾಗಿ ತಾಲೂಕಿನ ಹುನಗುಂದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಡಾ.ರಮೇಶ ಅಂಬಿಗೇರ ಗುರುವಾರ ಅವಿರೋಧವಾಗಿ ಆಯ್ಕೆಯಾದರು. 

ಪಟ್ಟಣದ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಕಾರ್ಯದರ್ಶಿಯಾಗಿ ಚಿಗಳ್ಳಿ ಸರಕಾರಿ ಪ್ರೌಢಶಾಲೆಯ ದಾಸಪ್ಪ ಎ., ಖಜಾಂಚಿಯಾಗಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ್(ಪ್ರೌಢಶಾಲೆ ವಿಭಾಗ)ನ ಶಿಕ್ಷಕಿ ತನುಜಾ ನಾಯ್ಕ, ರಾಜ್ಯ ಸಮಿತಿ ಸದಸ್ಯರಾಗಿ ಕಾತೂರ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಗಣೇಶ ಪಟಗಾರ ಅವಿರೋಧವಾಗಿ ಆಯ್ಕೆಯಾದರು.   

ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ರಮೇಶ ಅಂಬಿಗೇರ ಮಾತನಾಡಿ ಇಲಾಖೆ ಮತ್ತು ಸಂಘ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜೊತೆ-ಜೊತೆಯಾಗಿ ಸಾಗಬೇಕು. ಇಲಾಖೆ ಜೊತೆಗಿದ್ದೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಇಲಾಖೆಗೆ ಸಹಕಾರ ನೀಡುವ ಕಾರ್ಯ ಮಾಡುತ್ತೇವೆ. ಶಿಕ್ಷಕರು ನಮಗೆ ಆಯ್ಕೆ ಮಾಡಿ ಜವಾಬ್ದಾರಿ ನೀಡಿದ್ದಾರೆ. ಜವಾಬ್ದಾರಿಯನ್ನು ನಾವು ನಿಭಾಯಿಸುತ್ತೇವೆ. ಪ್ರೌಢಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು.   

ಈ ಸಂದರ್ಭದಲ್ಲಿ ದೈಹಿಕ ಪರೀವೀಕ್ಷಕ ಶಿವಮೂರ್ತಿ, ಪಾಂಡುರಂಗ ಟಿಕ್ಕೋಜಿ, ಬಿಆರ್‌ಪಿ ನಾಗರಾಜ ನಾಯ್ಕ, ಜ್ಯೋತಿ ಆಚಾರಿ, ಈಶ್ವರ ಹಿತ್ತಲಮನಿ, ಪ್ರಶಾಂತ ಸಾವಳಗಿ, ವನಿತಾ ಸಾಲಗಾಂವಿ, ಸಿಆರ್‌ಪಿ ಮಾನಸಿಂಗ್ ರಾಠೋಡ ಮುಂತಾದವರು ಉಪಸ್ಥಿತರಿದ್ದರು. ಚುನಾವಣಾ ಅಧಿಕಾರಿಯಾಗಿ ಈರೇಶ ಕಾರ್ಯ ನಿರ್ವಹಿಸಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 


ಸುದ್ದಿ ಓದಿ