ಅತ್ಯುನ್ನತ ಅಧಿಕಾರ ನೀಡುವುದರಿಂದ ಜನರಿಗೆ ಮಾರಕ: ಡಾ.ರಮೇಶ್ ಗೋಪಾಲ್
ಬಳ್ಳಾರಿ 18: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರದ ಭವಿಷ್ಯಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹವಾದರೂ ಜಿಎಸ್ಟಿ ಕಾಯ್ದೆ ವಿμÀಯದಲ್ಲಿ ಅಧಿಕಾರಿಗಳಿಗೆ ಪರಮೋಚ್ಛ ಅಧಿಕಾರ ನೀಡುವುದರಿಂದ ಜನರಿಗೆ ಮತ್ತು ವ್ಯವಹಾರ ಮಾಡುವವರ ಮೇಲೆ ತೀವ್ರವಾದ ದುಷ್ಪರಿಣಾಮ ಬೀರಲಿದೆ ಎಂದು ಉದ್ಯಮಿ, ಸಮಾಜ ಸೇವಕ ಡಾ.ರಮೇಶ್ ಗೋಪಾಲ್ ವಿಶ್ಲೇಷಿಸಿದ್ದಾರೆ. ಜಿಎಸ್ಟಿಯಿಂದಾಗುವ ಸಾಧಕ-ಬಾಧಕಗಳ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವ್ಯಾಪಾರಿಗಳು ನಿರ್ವಹಿಸುವ ಉತ್ಪನ್ನಗಳು ಮತ್ತು ಮಾರಾಟವಾಗುವ ವಸ್ತುಗಳಲ್ಲಿ ಲೋಪವಿದ್ದಲ್ಲಿ ಕೂಡಲೇ ಅಧಿಕಾರಿಗಳು ಜಿಎಸ್ಟಿ ನೆಪದಲ್ಲಿ ಅನುಮತಿ(ಲೈಸೆನ್ಸ್) ರದ್ದುಪಡಿಸುತ್ತಾರೆ. ಇದು ವ್ಯಾವಹಾರಿಕವಾಗಿ ತೊಡಗಿಸಿಕೊಂಡವರಿಗೂ ಮತ್ತು ಜನರಿಗೂ ಮಾರಕವಾಗಲಿದೆ. ಮೋದಿ ಅವರು ಮೌಲಿಕ ಆಡಳಿತ ನಡೆಸುವುದರಲ್ಲಿ ಜಗದ್ವಿಖ್ಯಾತಿ ಪಡೆದಿರುವ ಬಗ್ಗೆ ಹೆಮ್ಮೆ ಇದೆ. ಜಿಎಸ್ಟಿ ವಿಷಯವಾಗಿ ಅಧಿಕಾರಿಗಳಿಗೆ ಮರಮೋಚ್ಛ ಅಧಿಕಾರ ನೀಡಿರುವುದು ಸಮಂಜಸವಲ್ಲ ಎಂದು ಪ್ರತಿಪಾದಿಸಿದರು.
ಜನ ಸಾಮಾನ್ಯರು, ಮಾರಾಟಗಾರರು, ವ್ಯಾಪಾರಸ್ಥರು ನಡೆಸುವ ವಹಿವಾಟುಗಳ ಉತ್ಪನ್ನಗಳ ಗುಣಮಟ್ಟದಲ್ಲಿ ಕಳಪೆ ಅಥವಾ ಇನ್ನೇನಾದರೂ ಕಂಡು ಬಂದಲ್ಲಿ ಕ್ರಮಕೈಗೊಳ್ಳಲು ಕೆಲ ವಿಧಾನಗಳನ್ನು ಅನುಸರಿಸಬೇಕಿತ್ತು. ತಪ್ಪಿತಸ್ಥರಿಗೆ ಮೊದಲ ಸಲ 1ಕ್ಕೆ ಐದರಷ್ಟು, 2ನೇ ಬಾರಿ ಲೋಪ ಕಂಡು ಬಂದಾಗ 10 ರಷ್ಟು ದಂಡ ವಿಧಿಸಿ ಎಚ್ಚರಿಕೆ ನೀಡಬೇಕು. 3ನೇ ಬಾರಿಗೆ ಲೋಪ ಕಂಡು ಬಂದಲ್ಲಿ ಲೈಸೆನ್ಸ್ ಅಮಾನತ್ತಿಲ್ಲಿಟ್ಟು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳಿಗೆ ಪರಮೋಚ್ಛ ಅಧಿಕಾರ ನೀಡಿದಾಗ ಅವರು ಕೈಗೊಳ್ಳುವ ಕಾನೂನಾತ್ಮಕ ನಿರ್ಧಾರದಿಂದ ವ್ಯಾಪಾರಿಗಳಿಗೆ, ಜನ ಸಾಮಾನ್ಯರಿಗೆ ಇದರಿಂದ ಮರ್ಮಾಘಾತದಂತಹ ಹೊಡೆತ ಬೀಳಲಿದೆ. ಈ ಕುರಿತು ಪ್ರಧಾನಮಂತ್ರಿಯವರು ಜನಸಾಮಾನ್ಯರ ಕುರಿತೂ ಆಲೋಚಿಸಬೇಕಿತ್ತು ಎಂದರು.ಉದಾಹರಣೆಗೆ, ಒಬ್ಬ ಉದ್ಯಮಿ ಬಳ್ಳಾರಿಯಿಂದಲೇ ತನ್ನ ಉತ್ಪನ್ನವನ್ನು ಲಾರಿ ಮೂಲಕ ಪಂಜಾಬ್ ಗೆ ರಫ್ತು ಮಾಡಬೇಕೆಂದರೆ ಸಾರಿಗೆ ವಾಹನವು ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ಮಧ್ಯಪ್ರದೇಶ, ದೆಹಲಿ, ಬಳಿಕ ಪಂಜಾಬ್ ಗೆ ತೆರಳಬೇಕು. ಈ ಎಲ್ಲ ರಾಜ್ಯಗಳಲ್ಲಿ 600 ಅಧಿಕಾರಿಗಳು ತಪಾಸಣೆ ನಡೆಸಿ, ದಂಡ ವಿಧಿಸಿದರೆ ಉದ್ಯಮಿಯ ಪರಿಸ್ಥಿತಿ ಹೇಗಾಗಬೇಡ. ಮೋದಿ ಅವರು ಜನಸಾಮಾನ್ಯರ ಬದುಕು, ಬವಣೆಗಳ ಜೊತೆಗೆ ವ್ಯಾಪಾರಸ್ಥರು ಹೂಡುವ ಹಣಕಾಸಿನ ಸ್ಥಿತಿ-ಗತಿಗಳನ್ನೂ ಸಹ ಅರ್ಥಮಾಡಿಕೊಳ್ಳಬೇಕು. ಇಲ್ಲದೇ ಹೋದರೆ ದೇಶಕ್ಕೆ ಆರ್ಥಿಕವಾಗಿ ಬಹುದೊಡ್ಡ ಪೆಟ್ಟು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.