ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ
ಬಳ್ಳಾರಿ 24: ಅಖಿಲ ಕರ್ನಾಟಕ ಅಪ್ಪು ಸೇವಾ ಸಮಿತಿ ವತಿಯಿಂದ ಡಾಕ್ಟರ್ ರಾಜಕುಮಾರ್ ಮತ್ತು ಕಪ್ಪಗಲ್ ಬಿ.ಚಂದ್ರಶೇಖರ್ ಆಚಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಬಳ್ಳಾರಿ ನಗರದ ರಾಜಕುಮಾರ್ ಉದ್ಯಾನವನದಲ್ಲಿ ರಾಜಕುಮಾರ್ ಅವರ ಪುತ್ಥಳಿಗೆ ಮಾಲಾರೆ್ಣ ಮಾಡಲಾಯಿತು.
ನಂತರ ಸಂಗನಕಲ್ಲು ಆದರ್ಶ ವೃದ್ಧಾಶ್ರಮದಲ್ಲಿ ಕೇಕ್ ಕಟ್ ಮಾಡುವುದರ ಜೊತೆಗೆ ಹಿರಿಯ ನಾಗರಿಕರಿಗೆ ವಸ್ತ್ರ ಹಾಗೂ ಅನ್ನದಾನ ಮಾಡಲಾಯಿತು. ಕಪ್ಪಗಲ್ ಬಿ ಚಂದ್ರಶೇಖರ ಆಚಾರ್, ಡಾ ರಾಜಕುಮಾರ್ ಸಿನಿಮಾಗಳು ಸಮಾಜಕ್ಕೆ ಕನ್ನಡಿ ಇದ್ದಂತೆ. ಎಷ್ಟು ಜನರ ಬದುಕಲ್ಲಿ ಬದಲಾವಣೆಗಳು ಆಗಿವೆ, ಅವರು ಬಹಳ ಮುಗ್ದ ವ್ಯಕ್ತಿತ್ವವುಳವರು. ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಪಾರ ಗೌರವ, ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಅವರಂತೆ ಹೀಗ ಪುನೀತ ರಾಜಕುಮಾರ್ ಅಭಿಮಾನಿಗಳನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಒಟ್ಟಾರೆ ಡಾ. ರಾಜ್ ಕನ್ನಡಕ್ಕೆ ಒಬ್ಬನೇ ರಾಜಕುಮಾರ್ ಎಂದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಜೆ ಪಿ, ಅಧ್ಯಕ್ಷರಾದ ಅಪ್ಪು ರವಿ, ಅಭಯ ಪೌಂಡೇಶನ್ ರಾಮಕೃಷ್ಣ ರೆಣಿಗುಂಟ್ಲ, ಸುಂಕಪ್ಪ, ಆಪ್ತಮಿತ್ರ ಬಾಷ, ಬಿ ಸಿ ಕೌಶಿಕ ಆಚಾರ್, ಕೆ ಸೂರಜ್, ರವಿ, ರಘು ಇದ್ದರು