ಡಾ. ರಾಜ್ಕುಮಾರ್ ಹುಟ್ಟುಹಬ್ಬ, ಭಗವಾನ್ ಮಹಾವೀರ ಜಯಂತಿ
ಸಿರುಗುಪ್ಪ 25: ಸಾಹಿತಿಗಳು ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರು ನಾಡಿನ ರಾಜಕೀಯ ಶಕ್ತಿ ಯಾಗಿ ಬೆಳೆದು ಬರುವುದು ಸಹಜ ಕನ್ನಡ ಖ್ಯಾತ ವರನಟ ಡಾ ರಾಜ್ ಕುಮಾರ್ ಅವರು ಸಾಹಿತ್ಯಕ ಸಾಂಸ್ಕೃತಿಕ ಸಾಮಾಜಿಕ ಅಪರೂಪದ ನಟನಾಗಿ ಕನ್ನಡಿಗರ ಹೃದಯ ಸಾಮ್ರಾಜ್ಯದ ದೊರೆಯಾಗಿ ಜೀವಂತ ಮಾದರಿಯಾಗಿದ್ದರು ಎಂದು ಜನಾಭಿಪ್ರಾಯ ಮುಖಂಡ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಸಾಹಿತಿ ಬಹುಭಾಷಾ ಕವಿ ಗಾಯಕ ಕನ್ನಡಾಭಿಮಾನಿ ಎ ಅಬ್ದುಲ್ ನಬಿ ಹೇಳಿದರು.
ಸಿರುಗುಪ್ಪ ನಗರದ ಇಬ್ರಾಹಿಮ್ ಮಂಜಿಲ್ನಲ್ಲಿ ಅವರು ಚಲನಚಿತ್ರ ನಟ ಡಾ ರಾಜ್ ಕುಮಾರ್ ಅವರ 92ನೇ ಹುಟ್ಟುಹಬ್ಬ ಹಾಗೂ ಭಗವಾನ್ ಮಹಾವೀರರ ಜನ್ಮದಿನ ವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಮಾತನಾಡುತ್ತಾ ಸಾವಿನ ಸಮಯದಲ್ಲಿ ನಿನ್ನ ಬಂಧು ಬಳಗ ಜೊತೆಗೆ ಬರುವುದಿಲ್ಲ ಸಂಪತ್ತು ನಿನ್ನನ್ನು ಬದುಕಿಸಾ ಲಾರದು ಆತ್ಮ ಕಲ್ಯಾಣದ ಜೊತೆಗೆ ಪರರ ಕಲ್ಯಾಣದ ಜೊತೆಗೆ ಪರರ ಕಲ್ಯಾಣವೇ ಪ್ರಥಮ ಕರ್ತವ್ಯ ಎಂಬುದನ್ನು ಮಹಾವೀರರು ನಂಬಿದ್ದರು ಬದುಕು ನೇರ ರೇಖೆಯಲ್ಲ ಎಂದು ಈಗಾಗಲೇ ಪ್ರಕೃತಿ ಎಚ್ಚರಿಕೆ ನೀಡಿದೆ ನಾನು ಎಂಬ ಅಹಂ ಕಳೆದು ನಾವು ಎಂಬ ಮಾನವೀಯ ದೃಷ್ಟಿಯಿಂದ ಬದುಕಿನಲ್ಲಿ ಅಳವಡಿಸಿಕೊಳ್ಳದಿದ್ದರೆ ಈ ಲೋಕದಲ್ಲಿ ಯಾರಿಗೂ ಉಳಿಗಾಲ ವಿಲ್ಲ ಸಕಲ ಜೀವಿಗಳನ್ನು ಸಮತೆಯಲ್ಲಿ ಕಂಡು ನೀನು ಬದುಕಿ ಇತರರನ್ನು ಬದುಕಲು ಬಿಡು ನಮ್ಮ ನಡೆ ನುಡಿಯಲ್ಲಿ ಅನುಸರಿಸಿದಾಗ ಮಾತ್ರ ಮಹಾವೀರ ಜಯಂತಿ ಸಾರ್ಥಕತೆ ದೊರಕುತ್ತದೆ ಎಂದು ಅಬ್ದುಲ್ ನಬಿ ಅಭಿಪ್ರಾಯಪಟ್ಟರು.
ಎ ಮೊಹಮ್ಮದ್ ಇಬ್ರಾಹಿಂ ಮೊಹಮ್ಮದ್ ರಫಿ ಮೊಹಮ್ಮದ್ ನೌಶಾದ್ ಅಲಿ ಜೆಸ್ಕಾಂ ಕಿರಿಯ ಸಹಾಯಕ ಬಿ ಜಿಲಾನ್ ಮೊಹಮ್ಮದ್ ಹಾಜಿ ಇತರರು ಇದರು.