ಬಳ್ಳಾರಿ

ಡಾ. ಪುನೀತ್ ಹುಟ್ಟುಹಬ್ಬ: ಅನ್ನದಾನ

ಡಾ. ಪುನೀತ್ ಹುಟ್ಟುಹಬ್ಬ: ಅನ್ನದಾನ

ಲೋಕದರ್ಶನ ವರದಿ 

ಬಳ್ಳಾರಿ 19: ಸಮಾಜಕ್ಕೆ ನೀಡಿರುವ ಅತ್ಯಮೋಘ ಸೇವೆಯಿಂದ ಮತ್ತು ಬಡವರ ಬದುಕಿಗೆ ನೆರವಾಗುವ ಅವರ ಆದರ್ಶ ಗುಣಗಳ ಮೂಲಕ ರಾಜ್ಯದ ಎಲ್ಲರ ಮನೆ ಮಗನಂತಾಗಿರುವ  ದಿವಂಗತ ನಟ ಡಾ. ಪುನೀತ್ ರಾಜ್‌ಕುಮಾರ್ ರವರ ಹುಟ್ಟಹಬ್ಬದ ಅಂಗವಾಗಿ ಮತ್ತು ಅವರ ಕೊನೆಯ ಚಿತ್ರ ಜೇಮ್ಸ್‌ ಬಿಡುಗಡೆಯ ಈ ದಿನ ನಗರದ ನಟರಾಜ್ ಚಿತ್ರಮಂದಿರದ ಹತ್ತಿರ ಸಮಾಜ ಸೇವಕರಾದ ಬಿ ತಾಯಣ್ಣನವರು ಅನ್ನದಾನ ಕಾರ್ಯಕ್ರಮವನ್ನು ನಡೆಸಿದರು.  


ಪುನೀತ್‌ರವರ ನಡೆ ನುಡಿ ಮತ್ತು ಅವರ ದೀನ ದಲಿತರಿಗೆ ನೆರವಾಗುವ ಗುಣಗಳಿಂದ ಪ್ರೇರಿತನಾಗಿ ನಾನು ಸಹ ಸಮಾಜಕ್ಕೆ ನನ್ನ ಕೈಲಾದ ಸೇವೆಯನ್ನು ಮಾಡಬೇಕೆಂದು ಅವರ ಹುಟ್ಟು ಹಬ್ಬದ ಈ ದಿನ ನೂರಾರು ಜನರಿಗೆ ಅನ್ನದಾನ ಮಾಡುವ ಮೂಲಕ ಅವರ ಸೇವೆಯನ್ನು ಮತ್ತು ಅವರನ್ನು ಸ್ಮರಿಸುವ ಕಾರ್ಯ ಮಾಡಬೇಕೆಂದುಕೊಂಡಿದ್ದೆ ಅದರಂತೆ ಈ ದಿನ ಅನ್ನದಾನ ನೆರವೇರಿಸುವ ಮೂಲಕ ನಟ ಪುನೀತ್ ರಾಜ್‌ಕುಮಾರ್‌ರವರನ್ನು ಜನ ಮನಸ್ಸಿನಲ್ಲಿ ಜೀವಂತವಾಗಿರಿಸುವ ಸಣ್ಣ ಪ್ರಯತ್ಮ ಮಾಡಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಪುನೀತ್ ಹೆಸರಿನಲ್ಲಿ ಮತ್ತಷ್ಟು ಸಾಮಾಜಿಕ, ಶೈಕ್ಷಣಿಕ ಸೇವೆಯಂತ ಕಾರ್ಯಕ್ರಮಗಳನ್ನು ನಡೆಸಿ ಬಡವರಿಗೆ ನೆರವಾಗುತ್ತೇನೆಂದರೆ ತಾಯಣ್ಣ ಸಮಾಜ ಸೇವಕರು 9886561499 ಸಂಪರ್ಕಿಸಬಹದು. 


ಸುದ್ದಿ ಓದಿ