ತಾಳಿಕೋಟಿ

ಡಾ. ಪ್ರಭುಗೌಡರು ರಾಜಕೀಯಕ್ಕೆ ಬರಲಿ:ರಾಮಲಿಂಗಯ್ಯ ಶ್ರೀ

ಡಾ. ಪ್ರಭುಗೌಡರು ರಾಜಕೀಯಕ್ಕೆ ಬರಲಿ:ರಾಮಲಿಂಗಯ್ಯ ಶ್ರೀ

ತಾಳಿಕೋಟಿ31:  ಜನರ ವಿಶ್ವಾಸವನ್ನು ಕಳೆದುಕೊಂಡು ಹಾಳಾಗಿ ಹೋಗುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲು ನೇತ್ರತಜ್ಞ ಡಾ. ಪ್ರಭುಗೌಡರಂಥಹ ಸೇವಾ ಮನೋಭಾವದ ವ್ಯಕ್ತಿಗಳು ರಾಜಕೀಯಕ್ಕೆ ಬರುವುದು ಅನಿವಾರ್ಯವಾಗಿದೆ ಎಂದು ಚಬನೂರ ಹಿರೇಮಠದ ಪಿಠಾಧಿಪತಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಪ. ಪೂ. ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.

ತಾಲೂಕಿನ ಚಬನೂರು ಗ್ರಾಮದಲ್ಲಿ ಶ್ರೀ ಅಮೋಘಸಿದ್ದೇಶ್ವರ ಜಾತ್ರೋತ್ಸವ ಹಾಗೂ ಉಚಿತ ಆರೋಗ್ಯ ಶಿಬಿರದ ಅಂಗವಾಗಿ ಹಮ್ಮಿಕೊಂಡ ಹಾಸ್ಯ ಸಂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. 

ರಾಜಕೀಯ ಕ್ಷೇತ್ರ ಸಾರ್ವಜನಿಕ ಬದುಕಿನ ಅವಿಭಾಜ್ಯ ಅಂಗ ಅದು ಪರಿಶುದ್ಧ ಪ್ರಾಮಾಣಿಕ ಹಾಗೂ ಸೇವಾಮನೋಭಾವದ ವ್ಯಕ್ತಿಗಳಿಂದ ಕೂಡಿದ್ದಾಗಿರಬೇಕು, ಆಗ ಮಾತ್ರ ಜನರ ಸೇವೆ ಮಾಡಲು ಸಾಧ್ಯ ಈ ಎಲ್ಲ ಅರ್ಹತೆಗಳು ಡಾ. ಪ್ರಭುಗೌಡರಲ್ಲಿವೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಡಾ. ಪ್ರಭುಗೌಡ ಪಾಟೀಲ ಕಳೆದ 22ವರ್ಷಗಳಿಂದ ವೈದ್ಯಕೀಯ ಕ್ಷೆತ್ರದಲ್ಲಿ ಕೆಲಸ ಮಾಡುತ್ತೀದ್ದೇನೆ ಜನರ ಸೇವೆ ಮಾಡಿದ ತೃಪ್ತಿ ಇದೆ. ಮಾಡಬೇಕಾದದ್ದು ಇನ್ನೂ ಸಾಕಷ್ಠಿದೆ, ಯಾವ ಕಾರಣಕ್ಕೂ ಜನರು ದೃಷ್ಠಿಹೀನರಾಗಬಾರದೆಂಬುದು ನನ್ನ ಕಳಕಳಿಯಾಗಿದೆ. ಉತ್ತಮ ಆರೋಗ್ಯ ಅತ್ಯಮೂಲ್ಯ ಸಂಪತ್ತಾಗಿದೆ. ಆರೋಗ್ಯದ ಮಹತ್ವ ಜನರು ತಿಳಿಯುವಂತಾಗಲೂ ಮುಂದಿನ ದಿನಗಳಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಸಹಯೋಗದೊಂದಿಗೆ ನಮ್ಮ ನಡೆ ಆರೋಗ್ಯದಡೆ ಅಭಿಯಾನವನ್ನು ಹಮ್ಮಿಕಕೊಳ್ಳಲಿದ್ದೇನೆ. ಜನರು ನನ್ನ ರಾಜಕೀಯ ಪ್ರವೇಶದ ಕುರಿತು ಮಾತನಾಡುತ್ತಿದ್ದಾರೆ. ನಾನು ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದಿದ್ದೇನೆ ನನಗೆ ರಾಜಕೀಯದ ಎಲ್ಲ ಏಳು -ಬೀಳುಗಳುಗೊತ್ತು ಆದರೆ ಈಗ ಅಂಥಹ ಯೋಚನೆವಿಲ್ಲದಿದ್ದರೂ ನಿಮ್ಮೆಲ್ಲರ ಅಭಿಪ್ರಾಯ ಇದ್ದದ್ದೆ ಆದಲ್ಲಿ ಖಂಡಿತಾ ಈ ಕುರಿತು ಸ್ಪಷ್ಟ ನಿಧರ್ಾರ ತೆಗೆದುಕೊಳ್ಳುತ್ತೇನೆ ಎಂದರು.

ಶಿಪ್ಪಿಂಗ ಕಾಪರ್ೋರೆಶನ್ ಆಫ್ ಇಂಡಿಯಾದ ನಿದರ್ೇಶಕ ಹಾಗೂ ಸಾಹಿತಿ ಶ್ರೀಕಾಂತ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ಸಿದ್ದರಾಮಪ್ಪ ಮುತ್ಯಾ ಒಡೆಯರ, ಇಟಗಿ ಶ್ರೀಗಳು, ಶಿವು ಮುತ್ಯಾ ಒಡೆಯರ, ಈರತಯ್ಯ ಹಿರೇಮಠ, ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ನರಸಿಂಹ ಜೋಷಿ, ಹಾಗೂ ಬಸವರಾಜ ಮಾಮನಿ ಆಗಮಿಸಿದ್ಧರು.

ಸಾಧಕರಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಅತ್ಯತ್ತಮ ಸಾಧನೆಗೈದು ಕೀತರ್ಿತಂದುಕೊಟ್ಟ ವಿದ್ಯಾಥರ್ಿನಿಯರಾದ ಶ್ರೇಯಾ ದೇಸಾಯಿ,  ತೇಜಸ್ವಿನಿ ಕೋಗಿಲ, ಸ್ನೇಹಾ ತೋನಶ್ಯಾಳ, ಸುವರ್ಣ ಕೋಳೂರ, ಹಾಗೂ ಸುಕನ್ಯಾ ಪಾಟೀಲರಿಗೆ ಸನ್ಮಾನಿಸಿ ಪ್ರೋತ್ಸಾಹಧನ ನೀಡಲಾಯಿತು.

ಕಾರ್ಯಕ್ರಮದ ನಂತರ ನಡೆದ ಹಾಸ್ಯ ಸಂಜೆಯಲ್ಲಿ ನಾಡಿನ ದಿಗ್ಗಜ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ ಹಾಗೂ ಅವರ ತಂಡ ಸೇರಿದ ಅಪಾರ ಜನಸ್ತೋಮವನ್ನು ರಂಜಿಸಿತು. 

ಸಾಹಿತಿ ಅಶೋಕ ಹಂಚಲಿ ನಿರೂಪಿಸಿದರು 

ಸುದ್ದಿ ಓದಿ