ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಡಾ. ಪ್ರಭುಗೌಡ ಆರ್ಥಿಕ ಸಹಾಯ
ತಾಳಿಕೋಟಿ15: ಸಾಲಭಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಬಿ. ಬಿ. ಇಂಗಳಗಿ ಗ್ರಾಮದ ಬಡ ರೈತ ಸಂಗಪ್ಪ ನಾಯ್ಕೋಡಿ ಕುಟುಂಬಕ್ಕೆ ಖ್ಯಾತ ನೇತ್ರತಜ್ಞ ಹಾಗೂ ಸಮಾಜ ಸೇವಕ ಡಾ. ಪ್ರಭುಗೌಡ ಚಬನೂರ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದರು.
ಆತ್ಮಹತ್ಯೆಯಿಂದ ಮೃತನಾದ ರೈತ ಸಂಗಪ್ಪ ನಾಯ್ಕೋಡಿ ಮನೆಗೆ ಭೇಟೀನೀಡಿದ ಡಾ. ಪ್ರಭುಗೌಡ ಚಬನೂರ ಅವರು ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿ, ಧನ ಸಹಾಯ ಮಾಡಿದರು. ಮೃತ ರೈತ ಪುತ್ರನ ಸಂಪೂರ್ಣ ಉಚಿತ ವ್ಯಾಸಂಗದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು ಜಿಲ್ಲೆಯಲ್ಲಿ ಈಗಾಗಲೇ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರಗಳಿಂದ ಸಾವಿರಾರು ಬಡವರ ಪಾಲಿಗೆ ಬೆಳಕಾದ ಡಾ. ಪ್ರಭುಗೌಡರು ಗ್ರಾಮೀಣ ಭಾಗದ ಬಡಜನತೆಗಾಗಿ ಹಲವಾರು ಸಮಾಜ ಸೇವಾ ಕಾರ್ಯಗಳ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಅವರ ಈ ಎಲ್ಲ ಸೇವಾ ಕಾರ್ಯಗಳನ್ನು ಮೆಚ್ಚುಗೆ ವ್ಯಕ್ತ ಪಡಿಸುವ ಗ್ರಾಮಸ್ಥರು ಅವರು ರಾಜಕೀಯಕ್ಕೆ ಬರಲೆಂದು ಬಯಸುತ್ತಾರೆ.
ಈ ಸಂದರ್ಭದಲ್ಲಿ ಶಿವನಗೌಡ ಪಾಟೀಲ ಮಲ್ಲನಗೌಡ ಪಾಟೀಲ ದತ್ತಾತ್ರೇಯ ಹೊಸಮಠ ಪಾಲಪ್ಪ ತಳವಾರ (ಅಸ್ಕಿ) ಇದ್ದರು.