ಬಳ್ಳಾರಿ

ಗಡಿಭಾಗದ ದ್ವಿಭಾಷಾ ಬಾಂಧವ್ಯ ಆರೋಗ್ಯಕರವಾಗಿರಬೇಕು: ಡಾ. ಮಂಡಲಿ ಬುದ್ಧಪ್ರಸಾದ್

ಗಡಿಭಾಗದ ದ್ವಿಭಾಷಾ ಬಾಂಧವ್ಯ ಆರೋಗ್ಯಕರವಾಗಿರಬೇಕು: ಡಾ. ಮಂಡಲಿ ಬುದ್ಧಪ್ರಸಾದ್

ಬಳ್ಳಾರಿ 15: ಗಡಿಭಾಗದ ದ್ವಿಭಾಷಾ ಬಾಂಧವ್ಯ ಆರೋಗ್ಯಕರವಾಗಿರಬೇಕು, ಘರ್ಷಣೆ, ಸಂಘರ್ಷಗಳಿಂದ ಜನಜೀವನ ನಷ್ಟವನ್ನು ಅನುಭವಿಸಬೇಕು. ದುಃಖಕ್ಕೆ ಈಡಾಗಬೇಕಾಗುವುದು ಎಂದು ಮಾತೃಭಾಷೆ ಮನೆಯಲ್ಲಿದ್ದು, ಪ್ರಾಂತ್ಯಭಾಷೆ ಪರಸ್ಪರ ಸ್ನೇಹದಲ್ಲಿರಬೇಕು. ಇದಕ್ಕೆ ಮಾದರಿಯಾಗಿದೆ ಬಳ್ಳಾರಿ ಪ್ರಾಂತ್ಯ ಎಂದು ಆಂಧ್ರ ಸರ್ಕಾರದ ಮಾಜಿ ಉಪಸಭಾಪತಿ ಡಾ. ಮಂಡಲಿ ಬುದ್ಧಪ್ರಸಾದ್  ನುಡಿದರು.ನಗರದ   ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಶರಣ ಸಭಾಂಗಣದಲ್ಲಿ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ 2021ರ ಯುಗಾದಿ ಪುರಸ್ಕಾರ ಸಮಾರಂಭದಲ್ಲಿ ಜ್ಯೋತಿ ಬೆಳಗಿ, ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ-ತೆಲುಗು ಭಾಷಾ ಬಾಂಧವ್ಯ ಬೆಸೆದ ಬಳ್ಳಾರಿ ರಾಘವ ಜೋಳದರಾಶಿ ದೊಡ್ಡನಗೌಡ, ನಾಟಕ ಪಿತಾಮಹ ಧರ್ಮವರಂ ಕೃಷ್ಣಾಚಾರ್ ಮುಂತಾದ ಗಮಕ ಕಲಾವಿದರು ನಮಗೆ ಮಾದರಿಯಾಗಿದ್ದಾರೆ. ಈ ಬೆಸುಗೆಯನ್ನು ಭದ್ರಪಡಿಸುವಂತೆ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಮಾದರಿಯಾಗಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪನವರು ಅಪಾಯದಿಂದ ಪಾರಾಗಲು, ವಿಧಿ ನಿಯಮವನ್ನು ತಪ್ಪಿಸಲು ಸಾಧ್ಯವಿಲ್ಲ. ಜ್ಯೋತಿಷ್ಯ, ವೈದ್ಯ, ಸ್ವಾಮಿಗಳೆಲ್ಲರೂ ಕಷ್ಟದಲ್ಲಿ, ದುಃಖದಲ್ಲಿ, ನೋವಿನಲ್ಲೂ ಒಳ್ಳೆಯದನ್ನೇ ಹೇಳುತ್ತಾರೆ. ಮಠಕ್ಕೆ ನಡೆದುಕೋ ಎನ್ನುತ್ತಾರೆ. ನಡೆದುಕೊಂಡ ಕಾಲಾವಧಿಯಲ್ಲಿ ಗ್ರಹಚಲನೆಯಾಗಿರುತ್ತದೆ. ಆಗ ಸಹಜವಾಗಿ ನಾನು ನಡೆದುಮಕೊಂಡಿದ್ದರಿಂದ ಗುಣವಾದೆ ಎಂದು ತಿಳಿಯುತ್ತಾರೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯನವರು ಜ್ಯೋತಿಷ್ಯ ದಿಕ್ಸೂಚಿಯಂತೆ ತಾತ್ಕಾಲಿಕ ನಡೆಯನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ ಎಂದರು. ಕಾರ್ಯಕ್ರಮದ ವಿಶೇಷವೆಂದರೆ, ಕಲೆ, ಸಾಹಿತ್ಯ, ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಥಮ ಬಾರಿಗೆ ಯುಗಾದಿ ಪುರಸ್ಕಾರದಲ್ಲಿ 19 ಜನ ಸಾಧಕರನ್ನು, ಕಲಾಭೂಷಣ ಬಿ.ಭೀಮಪ್ಪ ಚೆಟ್ಟಿಯವರ ಸ್ಮರಣಾರ್ಥ 6 ಪ್ರಶಸ್ತಿಗಳನನ್ನು, ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ಟಿ.ರಾಘವರ ಹೆಸರಿನಲ್ಲಿ 9 ಜನ ಕಲಾವಿದರಿಗೆ, ಸಾಂಸ್ಕೃತಿಕ ಸಾರ್ವಭೌಮ ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಹೆಸರಿನ ಪ್ರಶಸ್ತಿ 3 ಜನರನ್ನು, ರಂಗ ಕೋಗಿಲೆ ನಾಡೋಜ ಸುಭದ್ರಮ್ಮ ಮನ್ಸೂರರ ಹೆಸರಿನಲ್ಲಿ ಪ್ರಶಸ್ತಿಯನ್ನು ಇಬ್ಬರು ಕಲಾವಿದೆಯರಿಗೆ, ಕರ್ನಾಟಕಾಂಧ್ರ ದ್ವಿಭಾಷಾ ರತ್ನ ಜೋಳದರಾಶಿ ಗುತ್ತಿ ಚಂದ್ರಶೇಖರರೆಡ್ಡಿಯವರ ಹೆಸರಿನ ಪ್ರಶಸ್ತಿಯನ್ನು 5 ಸಾಧಕರಿಗೆ, ಅನ್ನಮಾಚಾರ್ಯ, ಪುರಂದರ, ತ್ಯಾಗರಾಜರ ಹೆಸರಿನ 3 ಪ್ರಶಸ್ತಿಗಳು, ನಾಟ್ಯ ಕ್ಷೇತ್ರ ಪ್ರಶಸ್ತಿಯಾಗಿ 6 ಸಾಧಕ ನೃತ್ಯ ಪಟುಗಳಿಗೆ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 8 ಜನ ಶಿಕ್ಷಕಿಯರಿಗೆ, ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ.ಯ 6 ವಿದ್ಯಾರ್ಥಿಗಳಿಗೆ, ಪಿ.ಯು.ಸಿ.ಯ ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದ 9 ವಿದ್ಯಾರ್ಥಿಗಳಿಗೆ ಹೀಗೆ ಒಟ್ಟು 88 ಸಾಧಕರಿಗೆ ಶಾಲು ಹೊದಿಸಿ ಸನ್ಮಾನಿಸಿ, ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಜಿ.ನಳಿನಿ ಪ್ರಾರ್ಥಸಿದರು, ಶೀಲಾ ಬ್ರಹ್ಮಯ್ಯನವರು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು, ಎಸ್.ಯಶ್ವಂತ್‍ರಾಜ್ ವಂದಿಸಿದರು.   ಕೆ.ಬಿ.ಸಿದ್ದಲಿಂಗಪ್ಪ ಮತ್ತು ಎಸ್.ಸತ್ಯನಾರಾಯಣ ನಿರೂಪಿಸಿದರು.

ಸುದ್ದಿ ಓದಿ