ಬಳ್ಳಾರಿ

ಉನ್ನತ ಶಿಕ್ಷಣ ಪಡೆದು ಸಾಧಕರಾಗಿ: ಡಾ. ಕುಪ್ಪಗಲ್

ಉನ್ನತ ಶಿಕ್ಷಣ ಪಡೆದು ಸಾಧಕರಾಗಿ: ಡಾ. ಕುಪ್ಪಗಲ್

ಬಳ್ಳಾರಿ 22 : ವಿವಿಧ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಲು ಹೆದ್ದಾರಿ, ಎಂಬುವುದು ನೆನಪಿಡಬೇಕು ಎಂದು ಪ್ರಾಂಶುಪಾಲರಾದ ಡಾ.ಕುಪ್ಪಗಲ್ ವೀರೇಶ್ ಹೇಳಿದರು. 

ರಾವ್‍ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನೀರಿಂಗ್ ವಿಭಾಗದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ “ಸ್ನಾತಕೋತ್ತರ ವಿದ್ಯಾರ್ಥಿಗಳ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿ.ಇ. ಇಂಜಿನೀರಿಂಗ್ ಪದವಿ ಕಟ್ಟಡದ ಬುನಾದಿ ಇದ್ದಂತೆ. ಆದರೆ, ಸ್ನಾತಕೋತ್ತರ ಪದವಿಗಳು ಅದರ ಮೇಲಿನ ಉತ್ತಮ ಅಂತಸ್ತುಗಳಿದ್ದಂತೆ. ಇಂಜನೀಯರಿಂಗ್ ಶಿಕ್ಷಣ ಪಡೆದ ನೀವು  ಇನ್ನೂ ಉನ್ನತ ಮಟ್ಟದ ಶಿಕ್ಷಣ ಪಡೆಯಲು ಬಂದಿರುವುದು ಸ್ವಾಗತಾರ್ಹ ಎಂದು ನುಡಿದರು. ಟಿ. ಹನುಮಂತರೆಡ್ಡಿ ಅವರು ಸ್ವಾಗತಿಸಿದರು.

ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೆ.ಎಸ್. ಬಸವರಾಜ, ಸದಸ್ಯರಾದ  ಅರವಟಗಿ ಪ್ರಭು, ಕೆ.ಎಂ. ಶಿವಮೂರ್ತಿ,  ಪ್ರಾಂಶುಪಾಲರಾದ   ಡಾ. ಕುಪ್ಪಗಲ್ ವಿರೇಶ್,  ಉಪ-ಪ್ರಾಂಶುಪಾಲರು ಡಾ. ಟಿ. ಹನುಮಂತರೆಡಿ,್ಡ , ಡೀನ್-ಅಕಾಡಮಿಕ್ ಡಾ. ಹೆಚ್.ಗಿರೀಶ್, ಡೀನ್-ಪರೀಕ್ಷಾ ವಿಭಾಗ ಡಾ. ಬಿ.ಶ್ರೀಪತಿ,  ಕಂಪ್ಯೂಟರ್ ಸೈನ್ಸ್  ಇಂಜಿನೀರಿಂಗ್ ವಿಭಾಗದ  ಡಾ.ಅನೂರಾಧ ಎಸ್.ಜಿ, ಡಾ.ಸಾಯಿಮಾಧವಿ, ಡಾ.ವೀರಗಂಗಾಧರ ಸ್ವಾಮಿ, ಹಾಗೂ ಆರ್ ವೈಎಂಇಸಿ ಕಾಲೇಜಿನ ಎಲ್ಲಾ  ವಿಭಾಗದ ಮುಖ್ಯಸ್ಥರು, ಬೋಧಕ- ಬೋಧಕೇತರರ ಸಿಬ್ಬಂದಿ ಭಾಗವಹಿಸಿದ್ದರು. 

ಕಂಪ್ಯೂಟರ್ ಸೈನ್ಸ್  ಇಂಜಿನೀರಿಂಗ್ ವಿಭಾಗದ ಡಾ. ಅನೂರಾಧ ಎಸ್.ಜಿ, ನಿರೂಪಣೆಮಾಡಿದರು, ಹಾಗೂ ಡಾ. ವೀರಗಂಗಾಧರ ಸ್ವಾಮಿ,  ಇವರು ವಂದನಾರ್ಪಣೆ ಮಾಡಿದರು.

ಸುದ್ದಿ ಓದಿ