ಡಾ. ಜಗಜೀವನ್ರಾಮ್ ಸಾಧನೆ ಅನುಸರಣೀಯ: ಪ್ರೊ. ಅಲಗೂರ
ಬಳ್ಳಾರಿ 06: ಸಮಾನತೆ ಮತ್ತು ಹಸಿರುಕ್ರಾಂತಿಯ ಹರಿಕಾರರು, ಭಾರತದ ಮಾಜಿ ಉಪರಾಷ್ಟ್ರಪತಿಗಳಾಗಿದ್ದ ಡಾ. ಬಾಬು ಜಗಜೀವನ ರಾಮ್ ಅವರ ಜೀವನ ಮತ್ತು ಸಾಧನೆಯು ಅನುಸರಣೀಯವಾದುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ ಹೇಳಿದರು. ಇಲ್ಲಿನ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ 114 ನೆಯ ಜನ್ಮದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು, ಡಾ. ಬಾಬು ಜಗಜೀವನ್ ರಾಮ್ ಅವರು ದಮನಿತ ವರ್ಗಗಳ ನಡುವೆ ಬೆಳೆದು ಬಂದರೂ ಗಾಂಧೀತತ್ವಗಳನ್ನು ಅಳವಡಿಸಿಕೊಂಡು ರಾಷ್ಟ್ರೀಯವಾದವನ್ನು ಬಲವಾಗಿ ಪ್ರತಿಪಾದಿಸಿದ ಸರ್ವ ಶ್ರೇಷ್ಠ ರಾಜಕಾರಣಿಯಾಗಿದ್ದರು. ಬಾಬೂಜಿಯವರ ಕೊಡುಗೆಗಳನ್ನು ಸ್ಮರಿಸುವ ಅಗತ್ಯತೆ ಇಂದಿಗೂ ಪ್ರಸ್ತುತವಿದೆ ಎಂದರು. ದೇಶದ ಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆಯ ಆಚರಣೆಯ ಉದ್ದೇಶವೇ ಅವರ ಜೀವನ, ಸಾಧನೆ, ತ್ಯಾಗ ಮತ್ತು ಪರಿಶ್ರಮ ಮತ್ತು ವ್ಯಕ್ತಿತ್ವದ ಬಗ್ಗೆ ಯುವ ಪೀಳೆಗೆಗೆ ತಿಳಿಸುವುದಾಗಿದೆ. ಹಾಗೇಯೇ ಬಾಬೂಜೀಯವರ ಸಾಧನೆಯ ಮತ್ತು ನವ ಭಾರತದ ನಿರ್ಮಾಣದ ಹಿಂದಿರುವ ಶ್ರಮ ಇಂದಿನ ಯುವ ಪೀಳಿಗೆಯು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು. ಹಸಿರುಕ್ರಾಂತಿಯ ಹರಿಕಾರರು ಭಾರತ ಸ್ವಾವಲಂಭಿಯಾಗಲು ಅವರು ಪಟ್ಟ ಶ್ರಮ ನಿಜಕ್ಕೂ ಅವಿಸ್ವರಣೀಯವಾದುದು. ಡಾ. ಬಾಬು ಜಗಜೀವನ ರಾಮ್ ಅವರ ಬದುಕೇ ಒಂದು ದಾರಿದೀಪ. ಅವರ ಮಾರ್ಗದರ್ಶನ ಮತ್ತು ಅವರು ನಡೆದುಬಂದ ದಾರಿ ಯುವ ಪೀಳಿಗೆಗೆ ಮಾರ್ಗದರ್ಶನವಾಗಲಿ ಎಂದರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸ್ಧಾಪಿತವಾಗಿರುವ ಡಾ. ಬಾಬು ಜಗಜೀವನರಾಮ್ ಅವರ ಅಧ್ಯಯನ ಪೀಠದಿಂದ ಬಾಬೂಜಿಯವರ ಜೀವನ ಸಾಧನೆ ಮತ್ತು ಅವರ ಚಿಂತನೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಗಳು ಸಾಗಿ ರಾಜ್ಯದ ಬೇರೆ ಬೇರೆ ವಿವಿಗೆಗಳಿಗೆ ಮಾದರಿಯಾಗಲಿ ಎಂದರು. ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಪೀಠದ ಸಂಯೋಜಕ, ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತುಗಳ್ನಾಡಿದರು. ವಿತ್ತ ಅಧಿಕಾರಿ ಡಾ. ಕೆ.ಸಿ. ಪ್ರಶಾಂತ, ಪ್ರಭಾರ ಕುಲಸಚಿವ ಮತ್ತು ಮೌಲ್ಯಮಾಪನ ಕುಲಸಚಿವ ಡಾ. ಶಶಿಕಾಂತ ಉಡಕೇರಿ, ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಧರು, ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಡಾ. ಕೆ. ಶಿವಪ್ರಕಾಶ ನಿರೂಪಿಸಿದರು. ರಾಮ್ದಾಸ್ ವಂದಿಸಿದರು.