ಬಳ್ಳಾರಿ

ಡಾ. ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ್‍ರಾಮ್ ಜಯಂತಿ ಆಚರಣೆ

ಡಾ. ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ್‍ರಾಮ್ ಜಯಂತಿ ಆಚರಣೆ

ಬಳ್ಳಾರಿ 14: ನಗರದ ಎಪಿಎಂಸಿ ಗಾಂಧೀಜಿ ತರಕಾರಿ ಮಾರುಕಟ್ಟೆಯಲ್ಲಿ ಪ್ರಪ್ರಥಮ ಬಾರಿ ಸಂವಿಧಾನ ಶಿಲ್ಪಿ, ಭಾರತ ರತ್ನ ಬಿ. ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಹಾಗೂ ಬಾಬು ಜಗಜೀವನ್‍ರಾಮ್ 113ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. 

ಎಪಿಎಂಸಿ ಮಾಜಿ ಸದಸ್ಯ ಪಾಲಣ್ಣನವರು ಮಾತನಾಡುತ್ತಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದುಳಿದ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅವರು ಪಟ್ಟ ಶ್ರಮ ಎಲ್ಲಾ ಪೀಳಿಗೆಗೂ ಉದಾಹರಣೆಯಾಗಲಿದೆ ಎಂದರು. ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್‍ರಾಮ್ ಅವರ 113ನೇ ಜಯಂತಿಯ ಶ್ರದ್ಧಾಪೂರ್ವಕ ಪ್ರಣಾಮಗಳು ತಿಳಿಸಿದರು. 

ತದನಂತರ ಮುಂಡ್ರಿಗಿ ನಾಗರಾಜು, ಮಾನಯ್ಯ,ಅರ್ಜುನ್ ಹೆಗಡೇ, ವೆಂಕಟೇಶ್ ಮಾತನಾಡುತ್ತಾ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ಸಮಾಜದಲ್ಲಿ ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆಗಳನ್ನು ಪ್ರತಿಪಾದಿಸುವ ಜೊತೆಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದ ಡಾ. ಅಂಬೇಡ್ಕರ್ ಅವರ ಸಾಧನೆ, ದೇಶ ನಿರ್ಮಾಣದಲ್ಲಿ ಅವರ ಕೊಡುಗೆ ಚರಿತ್ರಾರ್ಹವಾಗಿದೆ ಎಂದರು.ಬಡತನಕ್ಕೆ ವಿದ್ಯೆಯೇ ಮದ್ದು, ಜ್ಞಾನಕ್ಕಿಂತ ಬೇರೆ ಸಂಪತ್ತಿಲ್ಲ ಎಂದು ಇಡೀ ವಿಶ್ವಕ್ಕೆ ತೋರಿದ ಭಾರತದ ರತ್ನ. ಸ್ವತಂತ್ರ ಭಾರತದ ಮೊದಲ ಕಾನೂನು ಮತ್ತು ನ್ಯಾಯ ಮಂತ್ರಿಗಳಾದ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್"ರವರ ಜನ್ಮ ದಿನ ಅಂಬೇಡ್ಕರ್ ಜಯಂತಿ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಎಪಿಎಂಸಿ ಸಿಬ್ಬಂದಿ ಶರಣಬಸವ, ಮಂಜುನಾಥ್,ಪಿ.ಆರ್.ಎಲ್.ಆಂಜನೇಯುಲು,ರಾಜ,ಫೋಟೋ ರಾಜ,ದೇವರಾಜ್, ಎ.ಎಂ.ಆರ್.ರಾಜ, ನಂದೀಶ್, ಎಸ್.ಆರ್.ರಾಮಂಜಿನಿ,ಮಾರುತಿ,ಸುರೇಶ್, ಶ್ರೀನಿವಾಸ್,ಶಿವ,ಗೋವರ್ಧನ್,ಅನೂಪ್,ಕ್ರಿಷ್ಣ ಮತ್ತು ದಳಾಲಿ ವರ್ತಕರು ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ