ದಾನಿಗಳ ದಿನಾಚರಣೆ
ಬಳ್ಳಾರಿ 28: ವೀರಶೈವ ವಿದ್ಯಾವರ್ಧಕ ಸಂಘದ ತೊಗರಿ ವೀರಮಲ್ಲಪ್ಪ ಸ್ಮಾರಕ ಓಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿ. 28ರಂದು ದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುರುಸಿದ್ಧಸ್ವಾಮಿ ಯವರು ಹಾಗೂ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ, ಕಾಲೇಜಿನ ಮಹಾದಾನಿಗಳಾದ ತೊಗರಿ ವೀರಮಲ್ಲಪ್ಪನವರ ಮಗ ರಾಜೀವ ತೊಗರಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬೈಲುವದ್ದಿಗೇರಿ ರ್ರಿಸ್ವಾಮಿ, ಆಡಳಿತ ಮಂಡಳಿ ಸದಸ್ಯ ಎಸ್.ಪಿ.ಜಂಬನಗೌಡ, ಜಿ.ವಸಂತಕುಮಾರ್, ಪ್ರಾಂಶುಪಾಲ ಡಾ. ಮಂಜುನಾಥ ವಿ. ಜಾಲಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.