ಕನಕ ದುರ್ಗಮ್ಮ ದೇವಸ್ಥಾನಕ್ಕೆ 50 ಅಡಿ ಪುತ್ಥಳಿಗೆ ಏಣಿ ಕೊಡುಗೆ
ಬಳ್ಳಾರಿ : ನಗರದ ಕನಕ ದೇವಸ್ಥಾನದ ಆವರಣದಲ್ಲಿರುವ ಕನಕದುರ್ಗಮ್ಮ ದೇವಿಯ 50 ಅಡಿ ಪುತ್ಥಳಿಗೆ ನಾವುಗಳು ಪುತ್ಥಳಿಯ ಮೇಲೆ ಏರಿ ಹೂವಿನಹಾರ ಹಾಕುವ ಪದ್ಧತಿಯನ್ನು ಸ್ವಸ್ಥಿ ಮಾಡಬೇಕೆಂದು ಹಲವಾರು ಸಲ ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಮತ್ತು ಆಗಿನ ಆಡಳಿತ ನಾಯಕರಿಗೆ ಹಾಗೂ ಮುಜರಾಯಿ ಧರ್ಮದತ್ತಿ ಇಲಾಖೆ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಆದರೆ ಅವರಿಂದ ಯಾವುದೇ ಪ್ರಯೋಜನವಾಗಿಲ್ಲ.
ಈ ದೇವಸ್ಥಾನವು ಮುಜರಾಯಿ ಧರ್ಮದತ್ತಿ ಇಲಾಖೆಗೆ ಒಳಪಟ್ಟಿದ್ದು, ಅನೇಕ ಭಕ್ತರು ಅದರಲ್ಲಿಯು ಬಳ್ಳಾರಿ ಸಂಬಂಧಪಟ್ಟ ರಾಜಕೀಯ ನಾಯಕರು, ದೊಡ್ಡ-ದೊಡ್ಡ ವ್ಯಾಪಾರಸ್ಥರು, ಯಾರೂ ಕೂಡ ಈ ತಾಯಿಯ ಪುತ್ಥಳಿಗೆ ಏಣಿ ಹಾಕಲು ಮುಂದೆ ಬಂದಿಲ್ಲ ಹಾಗೂ ಸಹಕರಿಸಿಲ್ಲ, ಎಷ್ಟೋ ಜನರು ರಾಜಕೀಯವಾಗಿ, ವ್ಯಾಪಾರಾಭಿವೃದ್ಧಿಗಾಗಿ ಹಾಗೂ ಇನ್ನಿತರೆ ತಮ್ಮ-ತಮ್ಮ ಬೇಡಿದ ಬೇಡಿಕೆಗಳನ್ನು ಈಡೇರುವಂತೆ ಪ್ರಾರ್ಥಿಸುತ್ತಾರೆ. ಅಷ್ಟೇ ಅಲ್ಲದೇ ಕುಲ-ಮತ ಬೇದವಿಲ್ಲದೇ ಎಲ್ಲರೂ ಈ ಗ್ರಾಮ ದೇವತೆಗೆ ಪೂಜೆ ಮಾಡುತ್ತಾರೆ.
ಬಲಿಜ ಸಮಾಜದ ಜಿ.ಲಕ್ಷ್ಮಿದೇವಿ ಮತ್ತು ಅವರ ಪುತ್ರ ಜಿ.ವಿ.ರಮಣ ಹಾಗೂ ಅವರ ಕುಟುಂಬದವರು ಸ್ಪಂಧಿಸಿ, ತಾಯಿಯ ಪುತ್ಥಳಿಗೆ ಏಣಿಯನ್ನು ತಯಾರು ಮಾಡಿಸಿ, ಕೊಡುಗೆ ನೀಡಿರುತ್ತಾರೆ. ಇವರಿಗೆ ಈ ವಿಷಯದಲ್ಲಿ ಸಹಕಾರ ನೀಡಿದಂತಹ ಜಿಲ್ಲಾಧಿಕಾರಿಗಳಿಗೆ ಮತ್ತು ಹಿಂದೂ ಧರ್ಮದತ್ತಿ ಇಲಾಖೆಗೆ ನಮ್ಮ ಸೇನೆಯ ವತಿಯಿಂದ ಹಾಗೂ ಬಳ್ಳಾರಿಯ ಸಮಸ್ತ ಜನರ ಪರವಾಗಿ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇವೆ.