ಮುಂದಗೋಡ

ವಿಶೇಷ ಪೂಜೆಗಳಿಗೆ ರುದ್ರಮುನಿಸ್ವಾಮಿಗಳಿಂದ ಧನ ಸಹಾಯ

ವಿಶೇಷ ಪೂಜೆಗಳಿಗೆ ರುದ್ರಮುನಿಸ್ವಾಮಿಗಳಿಂದ ಧನ ಸಹಾಯ

ಮುಂಡಗೊಡ 21: ವಿಶ್ವ ಶಾಂತಿ ಲೋಕ ಕಲ್ಯಾಣಾರ್ಥವಾಗಿ ಸಕಲ ಜೀವರಾಶಿಗಳ ಉದ್ಧಾರವನ್ನು ಬಯಸಿ ಪಟ್ಟಣದ ಹಳೂರ ಓಣಿಯ ಪಂಡಿತ ಶ್ರೀ ವೇದಮೂರ್ತಿ ರುದ್ರಮುನಿಸ್ವಾಮಿಗಳಾದ ಚರಂತಯ್ಯ ಹಿರೇಮಠ ಅವರು ಪಟ್ಟಣದ ಮಂದಿರ, ದರ್ಗಾ, ಚರ್ಚ್‌ಗಳಲ್ಲಿ ಆಯಾ ಧರ್ಮಗಳ ಅನುಸಾರ ಪೂಜೆ ಪುನಸ್ಕಾರಕ್ಕೆ ತಲಾ 1111 ರೂಪಾಯಿ ಧನ ಸಹಾಯ ನೀಡಿದರು. 

ಈ ಕುರಿತು ಗ್ರಾಮದೇವತೆ ಶ್ರೀಮಾರಿಕಾಂಬಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪಟ್ಟಣದ ಶ್ರೀಮಾರಿಕಾಂಬಾ ದೇವಸ್ಥಾನ, ಆಂಜನೇಯ ದೇವಸ್ಥಾನ, ಕಲ್ಮೇಶ್ವರ ದೇವಾಲಯ, ರಜಾಕ-ಶಾ ದರ್ಗಾ, ಚರ್ಚ್‌, ಗಣಪತಿ ದೇವಸ್ಥಾನ, ಶರೀಫಸಾಹೇಬರ ದೇವಸ್ಥಾನ, ಬಸವೇಶ್ವರ ದೇವಸ್ಥಾನ ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ಧರ್ಮಕ್ಷೇತ್ರಗಳಿಗೆ ಜುಲೈ ತಿಂಗಳಲ್ಲಿ ಸತತವಾಗಿ 9 ದಿನ  ವಿಶೇಷ ಪೂಜೆ, ಪ್ರಾರ್ಥನೆ ಮತ್ತು ನಂದಾದೀಪ ಬೆಳಗಿಸು ಅಳಿಲು ಸೇವೆಯಾಗಿ 1111 ರೂಪಾಯಿಗಳ ಚೆಕ್‌ನ್ನು ಆಯಾ ಧರ್ಮದ ಮಂದಿರ-ಚರ್ಚ್‌- ದರ್ಗಾಗಳ ಪ್ರಮುಖರಿಗೆ ನೀಡಿದ ಶ್ರೀಗಳು, ಪ್ರತಿ ವರ್ಷ ಜುಲೈ ತಿಂಗಳಲ್ಲಿ ಪಟ್ಟಣದ ಎಂಟು ಧರ್ಮ ಕ್ಷೇತ್ರಗಳಿಗೆ ಸೇವೆಗಾಗಿ ಹಣವನ್ನು ನೀಡಲಾಗುವುದು. ಹಣ ನೀಡುವ ಕುರಿತಂತೆ ಕೋ. ಕ್ರೆಡಿಟ್ ಸೊಸೈಟಿ ವೊಂದರಲ್ಲಿ ಠೇವಣಿ ಇಡಲಾಗಿದೆ ಎಂದು ಮಾಹಿತಿ ನೀಡಿದರು 


ಸುದ್ದಿ ಓದಿ