ತಾಳಿಕೋಟಿ

ಇಂದ್ರೀಯಗಳ ದಾಸರಾಗಬೇಡಿ - ಶ್ರೀ ಶ್ರೀಶೈಲ ಜಗದ್ಗುರುಗಳು

ಇಂದ್ರೀಯಗಳ ದಾಸರಾಗಬೇಡಿ - ಶ್ರೀ ಶ್ರೀಶೈಲ ಜಗದ್ಗುರುಗಳು

ತಾಳಿಕೋಟಿ 11: ಮನುಷ್ಯನ ಬದುಕು ಸಾಫಲ್ಯತೆಯನ್ನು ಕಾಣಬೇಕಾದರೆ ಅವನು ಪಂಚೇಂದ್ರಿಯಗಳ ಮೇಲೆ ನಿಯಂತ್ರಣವನ್ನು ಸಾಧಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಇಂದ್ರೀಯಗಳ ದಾಸನಾದರೆ ಬದುಕು ಅಧಪಥನವಾಗುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು. ಹೇಳಿದರು.

ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು ದುರಭ್ಯಾಸ, ವ್ಯಸನಗಳಿಂದ ಮುಕ್ತರಾಗಿ, ಸದಾಚಾರದ ಬದುಕು ನಡೆಸುವಂತವರಾಗಬೇಕು. ಬಳಗಾನೂರ ಗ್ರಾಮ ವ್ಯಸನ ಮುಕ್ತವಾದರೆ ನಾನು ಇಲ್ಲಿಗೆ ಬಂದಿರುವುದು ಸಾರ್ಥಕವಾಗುತ್ತದೆ ಎಂದರು. 

ಪಾದಯಾತ್ರೆಯ ಕಾಯರ್ಾಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಮಾತನಾಡಿ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವ್ಪಾದರು ಅವರ ಪೀಠಾರೋಪಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವದ ನಿಮಿತ್ತ ಲೋಕ ಕಲ್ಯಾಣಕ್ಕಾಗಿ ಧರ್ಮ ಹಾಗೂ ಪರಿಸರ ರಕ್ಷಣೆಗಾಗಿ ಹಮ್ಮಿಕೊಂಡಿರುವ ಈ ಪಾದಯಾತ್ರೆಯ ಯಸಸ್ವಿಗಾಗಿ ನಾವೆಲ್ಲರೂ ಸಹಕರಿಸಬೇಕಾಗಿದೆ ಎಂದು ಹೇಳಿದರು. 

ವೇದಿಕೆಯಲ್ಲಿ ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಧರ್ಮಸಭೆಯಲ್ಲಿ ಬಳಗಾನೂರ, ತಮದಡ್ಡಿ, ಹಿರೂರ, ಚೋಕಾವಿ, ಸಾಸನೂರ, ಕೊಣ್ಣೂರದ ಅಪಾರ ಸಂಖ್ಯೆಯ  ಭಕ್ತರು ಭಾಗವಹಿಸಿದ್ದರು.

 

ಸುದ್ದಿ ಓದಿ