ಶ್ವಾನ ಪ್ರದರ್ಶನಕ್ಕೆ ಚಾಲನೆ: ಗಮನ ಸೆಳೆದ ಶ್ವಾನಗಳು

ಶ್ವಾನ ಪ್ರದರ್ಶನಕ್ಕೆ ಚಾಲನೆ: ಗಮನ ಸೆಳೆದ ಶ್ವಾನಗಳು

ಲೋಕದರ್ಶನ ವರದಿ 

ವಿಜಯಪುರ, ಫೆ.15 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಪೊಲೀಸ್ ಇಲಾಖೆ,ಮಹಾನಗರ ಪಾಲಿಕೆ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಪೊಲೀಸ್ ಪರೇಡ್ ಗ್ರೌಂಡನಲ್ಲಿ ಶನಿವಾರ ಏರಿ​‍್ಡಸಿದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಕ್ಕೆ ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಶ್ವಾನ ಪ್ರದರ್ಶನದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

ಈ  ಪ್ರದರ್ಶನದಲ್ಲಿ  ಸುಮಾರು 20 ವಿವಿಧ ತಳಿಯ ಶ್ವಾನಗಳು ಪಾಲ್ಗೊಂಡು,  ಸಾರ್ವಜನಿಕರ ಗಮನ ಸೆಳೆದವು. ಪ್ರದರ್ಶನಕ್ಕೆ 182 ಶ್ವಾನಗಳ ಮಾಲೀಕರು ಪ್ರದರ್ಶನಕ್ಕೆ ನೋಂದಣಿ ಮಾಡಿಕೊಂಡು ಪಾಲ್ಗೊಂಡರು. ಗ್ರೇಟ್ ಡನ್, ಲ್ಯಾಬ್ರಡಾರ್, ಗೋಲ್ಡನ್ ರಿಟ್ರೈವರ್, ಕಾಕರ್ ಸ್ಫೇನಿಯಲ್, ಮುಧೋಳ ಹೌಂಡ, ಪಮೇರಿಯನ್, ಸೈಬೇರಿಯನ್ ಹಸ್ಕಿ,ಡಾಗ್ ಅರ್ಜೆಂಟೆನಾ,ಬೀಗಲ್,ಸ್ವಿಡ್ಜು, ಕೇನ್ ಕಾರ್ಸೋ, ಪಸ್ಮಿ ಸೇರಿದಂತೆ ಹೀಗೆ ವಿವಿಧ ಮುದ್ದು ಶ್ವಾನಗಳು ಎಲ್ಲರ ಗಮನ ಸೆಳೆದವು. ಅಪರೂಪದ ಶ್ವಾನಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಇಲಾಖೆಯಿಂದ ಸ್ಥಾಪಿತ ಕೌಂಟರಿನಲ್ಲಿ ಪ್ರದರ್ಶನಕ್ಕೆ ಕರೆ ತಂದ ಶ್ವಾನಗಳ ನೋಂದಣಿ ಕಾರ್ಯ ನಡೆದು, ಆರೋಗ್ಯ ತಪಾಸಣೆ ನಡೆಸಿ, ರೇಬಿಸ್ ಲಸಿಕೆ ಹಾಗೂ ಆಹಾರ ನೀಡಲಾಯಿತು. 

 ಆಯ್ಕೆಯಾದ ಶ್ವಾನಗಳಿಗೆ ಅತ್ಯುತ್ತಮ ಪ್ರಶಸ್ತಿ ವಿತರಿಸಲಾಯಿತು. ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಎನ್‌.ನಾಗರಾಜ,ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಡಿ.ಆರ್‌.ಮಂಜುನಾಥ ಹಾಘೂ ಬೆಳಗಾವಿಯ  ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಚ್‌.ಡಿ.ಸಣ್ಣಕ್ಕಿ ಶ್ವಾನ ಪ್ರದರ್ಶನದಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ್ದರು. 

ಈ ಕಾರ್ಯಕ್ರಮದಲ್ಲಿ ಪಾಲಿಕ್ಲಿನಿಕ್ ಉಪ ನಿರ್ದೇಶಕರಾದ ಡಾ.ವಿಠೋಬಾ ಆಸಂಗಿಹಾಳ,ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ. ಸುಜಾತಾ ಪಾಟೀಲ ಹಾಗೂ ಡಾ.ಸತೀಶ ಮುಂಡಾಸ,ಡಾ.ಬೆಂಗಳೂರಿನ ಕೆ.ವಿ.ಎ ಅಧ್ಯಕ್ಷರಾದ ಡಾ.ಎಸ್‌.ಜಿ.ಯಲಗೋಡ, ಡಾ.ರಮೇಶ ರಾಠೋಡ,ಡಾ.ಬಾಳು ಬಂಡಿ,ಡಾ.ಪ್ರಕೃತಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿ,ಸಿಬ್ಬಂದಿ ಸೇರಿದಂತೆ ನಾಗರಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ