ಪಿಎಲ್ಡಿ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ದೊಡ್ಡ ಕೊರಗುಂದೆ ಕೇಶವರೆಡ್ಡಿ ಆಯ್ಕೆ
ಬಳ್ಳಾರಿ:ಮಾ (04) ನಗರದಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್ಡಿ ಬ್ಯಾಂಕ್) ಬಳ್ಳಾರಿ ಇದರ ನೂತನ ಅಧ್ಯಕ್ಷರಾಗಿ ದೊಡ್ಡ ಕೇಶವರೆಡ್ಡಿ. ವೀ ಕೊರಲಗುಂದಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಜಿ.ಎಂ ವೀರಭದ್ರಯ್ಯ ತಿಳಿಸಿದ್ದಾರೆ. ಬಿ.ನಾಗಭೂಷಣಗೌಡ ಬಾಣಾಪುರ ಇವರ ರಾಜೀನಾಮೆಯಿಂದ ಖಾಲಿ ಇದ್ದ ಬ್ಯಾಂಕಿನ ಅಧ್ಯಕ್ಷರ ಸ್ಥಾನಕ್ಕೆ ಸಹಕಾರಿ ಇಲಾಖೆಯ ಚುನಾವಣಾಧಿಕಾರಿಗಳಾದ ಜಿ.ಎಂ ವೀರಭದ್ರಯ್ಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಬಳ್ಳಾರಿ ಇವರು ಚುನಾವಣೆ ಪ್ರಕ್ರಿಯೆಯನ್ನು ನಡೆಸಿ ದೊಡ್ಡಕೇಶವರೆಡ್ಡಿ, ವಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆಯನ್ನು ಅವಿರೋಧವೆಂದು ಘೋಷಣೆ ಮಾಡಿದರು.
ಕೇಶವರೆಡ್ಡಿ, ಮಾತನಾಡಿ ರೈತರಿಗೆ ಬ್ಯಾಂಕ್ನಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ಮತ್ತು ಬ್ಯಾಂಕ್ನ ವ್ಯವಹಾರದ ಅಭಿವೃದ್ಧಿಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆಂದರು. ಬ್ಯಾಂಕ್ನಿಂದ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರ ಪ್ರಯೋಜನವನ್ನು ರೈತರು ಮತ್ತು ರೈತ ಕುಟುಂಬದ ಸದಸ್ಯರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೊಡ್ಡಕೇಶವರೆಡ್ಡಿ.ವಿ ಕೊರಗುಂದಿರವರನ್ನು ಬ್ಯಾಂಕಿನ ಉಪಾಧ್ಯಕ್ಷರಾದ ಕೇಶವರೆಡ್ಡಿ..ಎಂ ಹಾಗೂ ಆಡಳಿತ ಮಂಡಳಿ ನಿರ್ದೇಶಕರಾದ ಎಲ್.ಗೋವಿಂದ ನಾಯ್ಕ, ಬಿ.ಚಂದ್ರಶೇಖರ, ಎಂ.ವೆಂಕಟೇಶ್, ಬಿ.ಜಡೆಪ್ಪ, ಎಸ್.ದಾಕ್ಷಾಯಣಿ, ಕೆ.ಪಂಪಾಪತಿ, ಪಾಲಾಕ್ಷಪ್ಪ ಸಮ್ಮತಗೇರಿ, ಎ.ವೀರಾರೆಡ್ಡಿ, ಪಿ .ಮಲ್ಲಿಕಾರ್ಜುನ ರೆಡ್ಡಿ, ಪಾಲಾಕ್ಷಿರೆಡ್ಡಿ .ಕೆ ವ್ಯವಸ್ಥಾಪಕರಾದ .ಎ.ದೀಪಕ್ ಕುಮಾರ್ ಅಭಿನಂದಿಸಿದರು. ಬ್ಯಾಂಕಿನ ಸಿಬ್ಬಂದಿ ವರ್ಗ ಸ್ವಾಗತ ಕೋರಿದರು.
ಜನಗಣ ಒಕ್ಕೂಟದ ಎನ್ ಗಂಗಿರೆಡ್ಡಿ ನೂತನ ಅಧ್ಯಕ್ಷ ಕೇಶವರೆಡ್ಡಿಯವರನ್ನು ಸನ್ಮಾನಿಸಿ ಶುಭಕೋರಿದರು.