ವೈದ್ಯರ ಸೇವೆ ಅನನ್ಯ: ಜಗದೀಶ ಮೆಟಗುಡ್ಡ
ಬೈಲಹೊಂಗಲ 02- ವೈದ್ಯೋ ನಾರಾಯಣ ಹರಿ" ಎಂಬಂತೆ ದೇವರ ರೂಪದಲ್ಲಿ ಧರೆಯ ಮೇಲೆ ನಾಡಿನ ಜನತೆಯ ಸೇವೆಗೈಯುತ್ತಿರುವ ನಾಡಿನ ಸಮಸ್ತ ವೈದ್ಯರ ಸೇವೆ ಅನನ್ಯವಾದುದು ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು.
ಅವರು ಗುರುವಾರ ವೈದ್ಯರ ದಿನಾಚಾರಣೆ ನಿಮಿತ್ಯ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗೆ ಸನ್ಮಾನಿಸಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ವಿಶ್ವಕ್ಕೆ ಅಂಟಿಕೊಂಡಿರುವ ಕರೋನಾ ಮಹಾಮಾರಿಯಿಂದ ಸಾರ್ವಜನಿಕರನ್ನು ರಕ್ಷಿಸುವ ಕಾರ್ಯದಲ್ಲಿ ವೈದ್ಯರ ಪಾತ್ರ ಹಿರಿದಾಗಿದೆ ಎಂದರು.
ವೈದ್ಯಾಧಿಕಾರಿ ಡಾಕ್ಟರ್ ನಿರ್ಮಲಾ ಮಹಾಂತಶೆಟ್ಟಿ ,ಪುರಸಭೆ ಸದಸ್ಯ ಗುರು ಮೆಟಗುಡ, ಸುಭಾಷ ತುರುಮರಿ, ಸಂತೋಷ ಹಡಪದ, ಸಚಿನ್ ಕಡಿ, ರವಿ ತುರಮರಿ, ಶ್ರೀಮತಿ ಅನಿತಾ ಗುರು ಮೆಟಗುಡ್ಡ ಹಾಗೂ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇದ್ದರು.