ಶಾಂತಲಾ ಅವರಿಗೆ ಡಾಕ್ಟರೇಟ್ ಪದವಿ
ಬಳ್ಳಾರಿ ಮಾ.8, ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ ಸ್ವಾಯತ್ತ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಲಾ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಘೋಷಿಸಿದೆ.
ಶಾಂತಲಾ ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ. ರಾಬಟರ್್ ಜೋಸ್ ಅವರ ಮಾರ್ಗದರ್ಶನದಲ್ಲಿ ಆ್ಯನ್ ಅನಾಲಿಸಿಸ್ ಆಫ್ ವಿಮೆನ್ ರೆಪ್ರಸೆಂಟೇಶನ್ ಇನ್ ದಿ ಸೆಲೆಕ್ಟ್ ವಕ್ಸರ್್ ಆಫ್ ಯು.ಆರ್. ಅನಂತಮೂತರ್ಿ ಆ್ಯಂಡ್ ದೇವನೂರು ಮಹಾದೇವ' ಎಂಬ ಶೀಷರ್ಿಕೆಯಡಿಯಲ್ಲಿ ಸಂಶೋಧನೆ ಕೈಗೊಂಡು ಮಹಾಪ್ರಬಂಧವನ್ನು ಸಲ್ಲಿಸಿದ್ದು, ಈ ಮಹಾಪ್ರಬಂಧವನ್ನು ಪರೀಕ್ಷಕರು ಮೌಲ್ಯಮಾಪನ ಮಾಡಿ ಸಲ್ಲಿಸಿದ ವರದಿಗಳನ್ನು ಅನುಲಕ್ಷಿಸಿ ಶಾಂತಲಾ ಅವರಿಗೆ ಇಂಗ್ಲಿಷ್ ನಿಕಾಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಪ್ರದಾನ ಮಾಡಲು ಕುಲಪತಿಗಳು, ಸಿಂಡಿಕೇಟ್ ಸಭೆಯ ಪರವಾಗಿ ಒಪ್ಪಿಗೆ ನೀಡಿದ್ದಾರೆ. ಈ ಪ್ರಕಾರ ಸದರಿ ಅಭ್ಯಥರ್ಿಯು ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆಯಲು ಅರ್ಹರೆಂದು ಘೋಷಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.