ಬಳ್ಳಾರಿ

ಆರ್‌.ಎಂ.ಶ್ರೀದೇವಿಗೆ ಡಾಕ್ಟರೇಟ್ ಪದವಿ

ಆರ್‌.ಎಂ.ಶ್ರೀದೇವಿಗೆ ಡಾಕ್ಟರೇಟ್ ಪದವಿ

ಬಳ್ಳಾರಿ 09: ಸ್ಥಳೀಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಆರ್‌.ಎಂ.ಶ್ರೀದೇವಿ ಅವರಿಗೆ ಆಂಧ್ರಪ್ರದೇಶದ ಅನಂತಪುರಂನ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಘೋಷಿಸಿದೆ.  

ಈ ಕುರಿತು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ  ಪರೀಕ್ಷಾ ನಿಯಂತ್ರಕರು, ಅಧಿಸೂಚನೆಯನ್ನು ಹೊರಡಿಸಿದ್ದು,  ಆರ್‌.ಶ್ರೀದೇವಿ ಅವರು ಸದರಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕ ಡಾ.ಆರ್‌.ರಾಮಚಂದ್ರರೆಡ್ಡಿ ಅವರ ಮಾರ್ಗದರ್ಶನದಲ್ಲಿ “ಎ ಹಿಸ್ಟಾರಿಕಲ್ ಪರ್ಸ್‌ಪೆಕ್ಟಿವ್ ಆಫ್ ದೇವದಾಸಿ ಸಿಸ್ಟಮ್ ಇನ್ ಬಳ್ಳಾರಿ ಡಿಸ್ಟ್ರಿಕ್ಟ್‌" ಎಂಬ ಶೀರ್ಷಿಕೆಯಡಿಯಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಮೌಲ್ಯಮಾಪನ ಮತ್ತು ಮೌಖಿಕ ಪರೀಕ್ಷೆಯ ನಂತರ ವಿಶ್ವವಿದ್ಯಾಲಯವು ಪಿಎಚ್‌.ಡಿ. ಪದವಿಯನ್ನು ನೀಡಿದೆ ಎಂದು ತಿಳಿಸಿದ್ದಾರೆ.  

ಇವರನ್ನು ಸರಳಾದೇವಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ