ಬಳ್ಳಾರಿ

ಜನಾರ್ಧನರೆಡ್ಡಿಗೆ ಡಾಕ್ಟರೇಟ್ ಪದವಿ

ಜನಾರ್ಧನರೆಡ್ಡಿಗೆ ಡಾಕ್ಟರೇಟ್ ಪದವಿ

ಬಳ್ಳಾರಿ 07: ಸ್ಥಳೀಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈ. ಜನಾರ್ಧನರೆಡ್ಡಿ ಅವರಿಗೆ ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿಯನ್ನು ಘೋಷಿಸಿದೆ.  

ವೈ.ಜನಾರ್ಧನರೆಡ್ಡಿ ಅವರು ಅನಂತಪುರಂನ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ಬಿ.ಆನಂದ ನಾಯ್ಡು ಅವರ ಮಾರ್ಗದರ್ಶನದಲ್ಲಿ “ಚೈಲ್ಡ್‌ ಲೇಬರ್ ರೈಟ್ಸ್‌, ಪಾಲೀಸೀಸ್, ಪ್ರೋಗ್ರಾಮ್ಸ್‌ ಆಂಡ್ ಅಡ್ಮಿನಿಸ್ಟ್ರೇಷನ್ ಇನ್ ಇಂಡಿಯಾ ವಿಥ್ ಸ್ಪೆಷೆಲ್ ರೆಫೆರೆನ್ಸ್‌ ಆನ್ ದಿ ರೈಟ್ ಟು ಪ್ರೈಮರಿ ಎಜುಕೇಷನ್ ಅಮಾಂಗ್ ಚೈಲ್ಡ್‌ ಲೇಬರರ್ಸ್‌ ಆಫ್ ಬಳ್ಳಾರಿ ಡಿಸ್ಟ್ರೀಕ್ಟ್‌, ಕರ್ನಾಟಕ ಸ್ಟೇಟ್, ಇಂಡಿಯಾ” ಎಂಬ ಶೀರ್ಷಿಕೆಯ ಅಡಿಯಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಸದರಿ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿಯನ್ನು ಘೋಷಿಸಿದೆ.  

ಯರಬಾಪ ಜನಾರ್ಧನರೆಡ್ಡಿ ಅವರನ್ನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ಹೇಮಣ್ಣ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಅಂಗಡಿನಾಗರಾಜ, ಡಾ.ಬಿ.ಶ್ರೀನಿವಾಸಮೂರ್ತಿ, ಡಾ.ಕಾವಲ್ಲಯ್ಯ ಸಿ, ಡಾ.ಸರೋಜಾ, ಡಾ.ಟಿ.ವೀರಭದ್ರ​‍್ಪ, ಡಾ.ಟಿ.ದುರುಗಪ್ಪ, ಡಾ.ಕೆ.ಬಸಪ್ಪ ಸೇರಿದಂತೆ ಕಾಲೇಜಿನ ಎಲ್ಲಾ ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ