ಮುಂಡರಗಿ

ಸಮಾಜ ಸೇವಕ ಹಡಪದಗೆ ಡಾಕ್ಟರೇಟ್ ಪ್ರಶಸ್ತಿ

ಸಮಾಜ ಸೇವಕ ಹಡಪದಗೆ ಡಾಕ್ಟರೇಟ್ ಪ್ರಶಸ್ತಿ

ಮುಂಡರಗಿ 27:  ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಬೆಂಗಳೂರು ಇವರ ವತಿಯಿಂದ 2021-22 ನೇ ಸಾಲಿನ ಉತ್ತಮ ಸಮಾಜ ಸೇವಕ ಎಂದು ಪರಿಗಣಿಸಿ ಡಾಕ್ಟರೇಟ್ ಪದವಿಯನ್ನು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸಮಾಜ ಸೇವಕ ದೇವು ಹಡಪದ ಅವರಿಗೆ ದೊರೆತಿದ್ದು, ಅವರನ್ನು ಸನ್ಮಾನಿಸಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದು ಲಕ್ಷ್ಮೇಶ್ವರದ ವೀರಣ್ಣ ಹಡಪದ ಸಂತಸ ವ್ಯಕ್ತಪಡಿಸಿದರು.         

ಕಡ್ಲಿಗಡಬು ಹುಣ್ಣಿಮೆಯಂದು ಮಹಾಶರಣ ಜ್ಞಾನಿ ಹಡಪದ ಅಪ್ಪಣ್ಣನವರ ಜಯಂತಿ ದಿವಸ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು  ತುಂಬಾ ಸಂತೋಷದ ವಿಷಯವಾಗಿದೆ,ಇವರು ಅವಿರತವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಕಷ್ಟದಲ್ಲಿರುವ ಬಡವರಿಗೆ,ಬಡ ವಿದ್ಯಾರ್ಥಿಗಳಿಗೆ,ಅನಾಥರಿಗೆ, ಗರ್ಭಿಣಿಯರಿಗೆ ತಮ್ಮ ಕೈಲಾದ ಸಹಾಯವನ್ನ ಮಾಡಿ ಮಾನವೀಯತೆ ಮೆರೆಯುವ ವ್ಯಕ್ತಿ ದೇವು ಹಡಪದ.     ಮುಂಡರಗಿ ತಾಲೂಕಿನ ತಿಪ್ಪಾಪುರ ಗ್ರಾಮ ಪಂಚಾಯತ ಸದಸ್ಯರಾಗಿ ಸಹ ಐದು ವರ್ಷಗಳ ಕಾಲ ಗ್ರಾಮದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರದಿಂದ ತೆಗೆದುಕೊಂಡು ಬಂದು ಗ್ರಾಮವನ್ನು ಅಭಿವೃದ್ಧಿ ಪಡಿಸಿರುವ ಹೆಮ್ಮೆಯು ಸಹ ಇವರಿಗೆ ಇದೆ.      ತಮ್ಮ ಕ್ಷೌರಿಕ ವೃತ್ತಿಯ ಸೇವೆಯ ಜೊತೆಗೆ ಹಲವಾರು ಬಡ ಮಕ್ಕಳ ಆಶ್ರಮಕ್ಕೆ ತೆರಳಿ  ಉಚಿತವಾಗಿ ಕ್ಷೌರಿಕ ವೃತ್ತಿಯ ಸೇವೆಯನ್ನು ನೀಡುತ್ತಾ ಹಾಗೂ ತಮ್ಮದೇ ಒಂದು ಕಲ್ಪವೃಕ್ಷ ವಿವಿಧೋದ್ದೇಶಗಳ ಸಂಸ್ಥೆಯನ್ನು ಸ್ಥಾಪಿಸಿ ಅದರ ಮುಖಾಂತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ,ಬಡ ವಿದ್ಯಾರ್ಥಿಗಳಿಗೆ ಹಾಗೂ ಕಡುಬಡವರಿಗೆ ತಮ್ಮ ಸಹಾಯ ಸಹಕಾರವನ್ನು ನೀಡುತ್ತಾ ಉತ್ತಮ ಪ್ರಜೆಯಾಗಿ ಬೆಳೆದಿದ್ದಾರೆ.                       

ಇವರು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳವರ ಆಶ್ರಮದಲ್ಲಿರುವ ಅನಾಥ ಮಕ್ಕಳಿಗೂ ಸಹ ತಮ್ಮ ವೃತ್ತಿಯ ಸೇವೆಯನ್ನು ಮಾಡುತ್ತಾ ಬಂದಿದ್ದು, ಆಸ್ಪತ್ರೆಯಲ್ಲಿ ರಕ್ತದ ಅವಶ್ಯಕತೆ ಇರುವ ಸಂಕಷ್ಟದಲ್ಲಿರುವ ರೋಗಿಗಳಿಗೆ 25 ಭಾರಿ ಸ್ವತಃ ದೇವು ಹಡಪದ ರಕ್ತದಾನ ಮಾಡಿದ್ದು ಹಾಗೂ ಇವರ ಮುಂದಾಳತ್ವದಲ್ಲಿ 200 ಕ್ಕೂ ಹೆಚ್ಚಿನ ಜನರಿಂದ ರಕ್ತದಾನ ಸಹ ಮಾಡಿಸಿದ ಹೆಗ್ಗಳಿಕೆ ಇವರದ್ದು. ಸಮಾಜದಲ್ಲಿ  ಹಲವಾರು ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜದ ಬಗ್ಗೆ ಹಲವಾರು ಹೋರಾಟಗಳನ್ನು ಸಹ ಮಾಡಿ ಸಮಾಜದ ಸಕ್ರಿಯ ಚಟುವಟಿಕೆಯಲ್ಲಿ ಪಾಲ್ಗೊಂಡು ಉತ್ತಮ ಸಮಾಜ ಸೇವಕರಾಗಿರುವ  ಇಂಥಹ ದೇವು ಹಡಪದ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ಲಭಿಸಿರುವುದು ತುಂಬಾ ಸಂತೋಷವಾಗಿದೆ ಎಂದು ಇವರ ಸಹಪಾಟಿಗಳು ಸಂತಸ ವ್ಯಕ್ತಪಡಿಸುರಿತ್ತಾರೆ.  ನಿರಂತರವಾಗಿ ಇವರ ಸಮಾಜ ಸೇವೆ ಹೀಗೆ ಮುಂದುವರೆಯಲಿ  ಇವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಲಭಿಸಲಿ ದೇವು ಹಡಪದ ಒಬ್ಬ ಮಹಾನ್ ನಾಯಕನಾಗಿ ಹೊರಹೊಮ್ಮಲಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಇವರಿಗೆ  ತುಂಬು ಹೃದಯದಿಂದ ಆಶಿಸಿದ      ವೀರಣ್ಣ ಹಡಪದ್ ಲಕ್ಷ್ಮೇಶ್ವರ ಹಾಗೂ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಬಾಂಧವರು. 


ಸುದ್ದಿ ಓದಿ