ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲಿ ಗುರುಶಾಂತಲಿಂಗ ಶ್ರೀ
ಮಾಂಜರಿ12: ಗ್ರಾಮೀಣ ಭಾಗದಲ್ಲಿರುವ ಸರ್ವಸಾಮಾನ್ಯ ಜನರ ಆರೋಗ್ಯಕರ ದೃಷ್ಟಿಯಿಂದ ಎಲ್ಲ ವೈದ್ಯರು ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿ ಸಧೃಡ ಸಮಾಜ ನಿರ್ಮಾಣಕ್ಕಾಗಿ ಪಣತೊಟ್ಟಬೇಕಾಗಿದೆ ಎಂದು ಮಾಂಜರಿ ಗ್ರಾಮದ ಕಾಡಸಿದ್ದೇಶ್ವರ ಸಂಸ್ಥಾನ ಮಠದ ಗುರು ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರುಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಹೊಸದಾಗಿ ಪ್ರಾರಂಭಿಸುವ ಇಂದಿರಾ ಕ್ಲಿನಿಕ್ ದವಾಖಾನೆ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಮಾಂಜರಿ ಗ್ರಾಮದ ಹಿರಿಯ ವೈದ್ಯ ಡಾ ಶಾಮಗೌಡ ಪಾಟೀಲ್ ಹಾಜರಿದ್ದರು. ಮೊದಲಿಗೆ ಸ್ವಾಗತ ಡಾ ಅಭಿನಂದನ್ ಕೋಟಿವಾಲೆ ಮಾಡಿದರು. ಹೊಸದಾಗಿ ಪ್ರಾರಂಭಿಸಿರುವ ಇಂದಿರಾ ಕ್ಲಿನಿಕ್ ಉದ್ಘಾಟನೆಯನ್ನು ಪೂಜ್ಯರು ಹಾಗೂ ಡಾಕ್ಟರ್ï ಶಾಮಗೌಡಾ ಪಾಟೀಲ್ ನೆರವೇರಿಸಿದರು.ಡಾ ಶಾಮಗೌಡಾ ಪಾಟೀಲ್ ಮಾತನಾಡಿ ಗ್ರಾಮೀಣ ಭಾಗದ ಸರ್ವಸಾಮಾನ್ಯ ಜನರ ಆರೋಗ್ಯದೃಷ್ಟಿಕರ ಹಿತವನ್ನು ಕಾಪಾಡಿ ವೈದ್ಯಕೀಯ ವೃತ್ತಿಯನ್ನು ಮಾಡಬೇಕು ಎಂದು ಹೇಳಿದರು. ವೈದ್ಯ ಡಾ ರಮೇಶ್ ಖಿಚಡೆ ವಿಜಯ್ ಉಪಾಧ್ಯೆ ಜ್ಯೋತಿರಾಮ್ ಮನೆ ವೃμÀಭ ಕೋಟಿವಾಲೆ ತಾನಾಜಿ ರೋಡೆ ದಿಲಾವರ ಶಿರುಗುಪ್ಪ, ಶಿವಗೌಡ ಪಾಟೀಲ್ ಬಸವರಾಜ ಅವಟೆ, ನಿಜಗೌಡ ಕೋಟಿವಾಲೆ ಈರೇಗೌಡ ಕೋಟಿವಾಲೆ, ಸುಭಾμï ಕೋಟಿವಾಲೆ ಅಶೋಕ್ ಕೋಟಿವಾಲೆ ಹಾಗೂ ಗ್ರಾಮಸ್ಥರು ಮತ್ತು ನಾಗರೀಕರು ಹಾಜರಿದ್ದರು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಹೊಸದಾಗಿ ಪ್ರಾರಂಭಿಸಿರುವ ಇಂದಿರಾ ಕ್ಲಿನಿಕ್ ಉದ್ಘಾಟಿಸುವಾಗ ಗುರು ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಗಳು ಡಾ. ಶಾಮಗೌಡಾ ಪಾಟೀಲ್ ಹಾಗೂ ಇನ್ನೀತರು ಇದ್ದರು.