ಜಿಲ್ಲಾ ಮಟ್ಟಕ್ಕೆ ಆಯ್ಕೆ
ಶಿರಹಟ್ಟಿ 22: ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಉಭಯ ತಾಲೂಕ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಸ್ಪರ್ಧೆಗಳಲ್ಲಿ ತಾಲೂಕಿನ ತಂಗೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ವಿಜಯಶಾಲಿಗಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿರಹಟ್ಟಿ ತಾಲೂಕ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಖೋ ಖೋ ಆಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಂಗೋಡದ ವಿದ್ಯಾರ್ಥಿನಿಯರಾದ ಭಾಗ್ಯ ಕುರಿ, ಪವಿತ್ರ ಗೊಂಡೆದ, ಕವಿತಾ ಚನ್ನಮ್ಮನವರ, ವಿನೋದ ಗೂಡೂರು, ಗಂಗಮಾಳವ್ವ ಹಳ್ಳಿಯಾರ, ಉಷಾ ಕುರಿ, ಯಶೋದ ಮೇಲಿನಮನಿ, ಸುಧಾ ಹೊಸಮನಿ, ಪವಿತ್ರ ಭಜಂತ್ರಿ ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಗಳಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆಂದು ಅತಿಥಿ ಶಿಕ್ಷಕರರಾದ ಸುಭಾಷ್ ತಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.