ಜಿಲ್ಲಾ ಮಟ್ಟದ ಸಾಧಕರಿಗೆ ಸನ್ಮಾನ
ಲೋಕದರ್ಶನ ವರದಿ
ಮುಂಡಗೋಡ:ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚೆಗೆ ಶಿರಸಿಯಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಜಿಲ್ಲಾ ಮಟ್ಟದ ಸಾಧಕರನ್ನು ಸನ್ಮಾನಿಸಲಾಯಿತು.
ಆಂಬುಲೆನ್ಸ್ನಲ್ಲಿಯೇ ಹಲವಾರು ಸುರಕ್ಷಿತ ಹೆರಿಗೆಗಳನ್ನು ಮಾಡಿಸಿ ತಾಯಿ ಮಗುವಿನ ಆರೋಗ್ಯ ಕಾಪಾಡಿದ ಆರೋಗ್ಯ ಇಲಾಖೆಯ ತುತರ್ು ಸೇವಾ ವಿಭಾಗದ ಪಟ್ಟಣದ 108 ಆಂಬುಲೆನ್ಸ್ನ ತುರ್ತ ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಇವರನ್ನು ಮಾನವ ಹಕ್ಕುಗಳ ರಕ್ಷಣಾ ಪರಿಷತ್ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕದಿಂದ ಸನ್ಮಾನಿಸಲಾಯಿತು. ಹೊರ ರಾಜ್ಯದ ಸುಮಾರು 30ಕ್ಕೂ ಹೆಚ್ಚು ಹಾಗೂ ರಾಜ್ಯದ ಸುಮಾರು 35ಕ್ಕೂ ಹೆಚ್ಚು ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಮಾನವ ಹಕ್ಕುಗಳ ರಕ್ಷಣಾ ಪರಿಷತ್ನ ಸಂಸ್ಥಾಪಕ ಅಗ್ನಿ ಎಮ್.(ದೆಹಲಿ), ರಾಜ್ಯಾಧ್ಯಕ್ಷ ಗಣೇಶ ನಾಯ್ಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ದೇಶಳ್ಳಿ, ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ರೋಹಿಣಿ ದಿಕ್ಷಿತ್, ರಾಜ್ಯ ಉಪಾಧ್ಯಕ್ಷ ಜೂಜೆ ಡಿಸೋಜಾ, ಜಿಲ್ಲಾಧ್ಯಕ್ಷ ಮಂಜುನಾಥ ಕೆ., ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶೋಭಾ ನಾಯ್ಕ, ಗ್ರೇಡ್-2 ತಹಶೀಲ್ದಾರ ರಮೇಶ ಹೆಗಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದತ್ತಾತ್ರೆಯ ಭಟ್, ಆರೋಗ್ಯ ಇಲಾಖೆ ಅಧಿಕಾರಿ ವಿನಾಯಕ ಭಟ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೇಶವಮೂರ್ತಿ ಇಮ್ಮಡಿ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.