ಬಳ್ಳಾರಿ

ಜಿಲ್ಲಾ ಮಟ್ಟದ ಸಮಾವೇಶ

ಜಿಲ್ಲಾ ಮಟ್ಟದ ಸಮಾವೇಶ

ನವೆಂಬರ್ 26, 2020ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಿ.

ಬಳ್ಳಾರಿ 12: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆ.ಸಿ.ಟಿ.ಯು) ವತಿಯಿಂದ ನ.26ರ ಆಖಿಲ ಭಾರತ ಸಾರ್ವತ್ರಿಕ ಮುಷ್ಕರ ಪ್ರಯುಕ್ತ ಜಿಲ್ಲಾ ಮಟ್ಟದ ಸಮಾವೇಶವನ್ನು ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಮಾವೇಶ ಉದ್ದೇಶಿಸಿ ಜೆಸಿಟಿಯು ನಾಯಕರು ಮಾತನಾಡುತ್ತಾ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಯಾದ ಹೊಸ ಆರ್ಥಿಕ ನೀತಿ ಮತ್ತು ಹೊಸ ಕೈಗಾರಿಕಾ ನೀತಿ ಮತ್ತು ಖಾಸಗೀಕರಣ ನೀತಿಯನ್ನು ಜಾರಿ ಗೊಳಿಸಿದವು. ತದನಂತರ ಈಗ ಅಧಿಕಾರದಲ್ಲಿ ಇರುವ ಕೇಂದ್ರ ಬಿಜೆಪಿ ಸರ್ಕಾರವಂತೂ ನೂರು ಹೆಜ್ಜೆ ಮುಂದೆ ಹೋಗಿ, ದೇಶದ ಜನರ ತೆರಿಗೆ ಹಣದಿಂದ ನೆಡೆಯುವ, ಸರ್ಕಾರಿ ಸ್ವಾಮ್ಯದ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನು ಖಾಸಗಿ ಯವರ ಮಡಿಲಿಗೆ ಹಾಕಿದೆ. ಸಂಸತ್ತಿನಲ್ಲಿ ತಮಗಿರುವ ಬಹುಮತವನ್ನು ದುರುಪಯೋಗ ಪಡಿಸಿಕೊಂಡು, ಸುಗ್ರೀವಾಜ್ಞೆಗಳ ಮೂಲಕ ಕಾರ್ಮಿಕ ಕಾಯ್ದೆಗಳನ್ನು ದುರ್ಬಲಗೊಳಿಸಿ, ರೈಲ್ವೆ, ವಿಮಾನ ನಿಲ್ದಾಣ, ಬ್ಯಾಂಕ್, ಬಿಎಸ್‍ಎನ್‍ಎಲ್, ಇಂಧನ, ಕಲ್ಲಿದ್ದಲು, ಉಕ್ಕು ಸೇರಿದಂತೆ ಎಲ್ಲವನ್ನೂ ಕಾರ್ಪೊರೇಟ್ ಮನೆತನಗಳಿಗೆ ಬಿಟ್ಟು ಕೊಟ್ಟಿದೆ, ಕಾರ್ಮಿಕರ ಕನಿಷ್ಠ ವೇತನವನ್ನು ತಗ್ಗಿಸಲು ಸರ್ಕಾರಗಳು ತುದಿಗಾಲಲ್ಲಿ ನಿಂತಿವೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ಒಗ್ಗೂಡಿ ನ.26 ರ ಮುಷ್ಕರವನ್ನುಋ ಯಶಸ್ವಿಗೊಳಿಸಬೇಕು ಎಂದು ಕಾರ್ಮಿಕರಿಗೆ  ಜೆಸಿಟಿಯು ನಾಯಕರು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್  ರವರು ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು, ಜಿಒಣ್ ಅಧ್ಯಕ್ಷರಾದ ಆರ್. ಸೋಮಶೇಖರ್ ಗೌಡ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ  ಜೆ. ಸತ್ಯಬಾಬು, ಜಿಲ್ಲಾಧ್ಯಕ್ಷರಾದ ಭಾಸ್ಕರ್ ರೆಡ್ಡಿ, ಎಐಟಿಂiಢದದಛ ಜಿಲ್ಲಾ ಕಾರ್ಯದರ್ಶಿ ಎ.ಆರ್.ಎಮ್.ಇಸ್ಮಾಯಿಲ್, ಅಧ್ಯಕ್ಷರಾದ ಆದಿಮೂರ್ತಿ ಮತ್ತು ಹಿರಿಯ ಕಾರ್ಮಿಕ ಮುಖಂಡರಾದ ಟಿ.ಜಿ.ವಿಠಲ್.ಇನ್ನೂ ಪ್ರಮುಖ ಮುಖಂಡರು ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ಧರು.

ಸುದ್ದಿ ಓದಿ