ಕೆಪಿಸಿಸಿ ಹೋರಾಟದಲ್ಲಿ ಜಿಲ್ಲೆಯ ಮುಖಂಡರು ಭಾಗಿ
ಬಳ್ಳಾರಿ 20: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ, ರೈತ ವಿರೋಧಿ ಮಸೂದೆಗಳನ್ನು ಖಂಡಿಸಿ ಹೋರಾಟ ಬೆಂಬಲಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ರವರ ನೇತೃತ್ವದಲ್ಲಿ ಬಳ್ಳಾರಿಯ ಎಲ್ಲಾ ಹಿರಿಯ ಕಾಂಗ್ರೆಸ್ ಮುಖಂಡರು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಲ್ಲಾ ಪಧಾಧಿಕಾರಿಗಳು ಮತ್ತು ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಮಾಜಿ ಕಾನೂನು ಮತ್ತು ಸಂಸಧೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರರವರು, ಮುಖಂಡರಾದ ರಘುರಾಮ್, ಮೋಕ-ರೂಪನಗುಡಿ ಬ್ಲಾಕ್ ಅಧ್ಯಕ್ಷರಾದ ಅಸುಂಡಿ ನಾಗರಾಜ ಗೌಡ, ಕಂಟೋನ್ಮೆಂಟ್ ಬ್ಲಾಕ್ ಅಧ್ಯಕ್ಷರಾದ ಪೆರಂ ವಿವೇಕ್, ಕೌಲ್ಬುಜಾರ್ ಬ್ಲಾಕ್ ಅಧ್ಯಕ್ಷರಾದ ಜಿ.ಜೆ.ರವಿಕುಮಾರ್, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎಂ.ಕುಮಾರಮ್ಮ, ಪ್ರಧಾನ ಕಾರ್ಯದರ್ಶಿ ಡಿ.ಅಯಾಜ್ ಅಹಮ್ಮದ್, ಕಾರ್ಯದರ್ಶಿಗಳಾದ ಎಂ.ಜೈ ಕುಮಾರ್ ನಾಯುಡು, ಕೆ.ತಾಯಪ್ಪ, ಅಲಿವೇಲು ಸುರೇಶ್, ಗೋನಾಳ್ ಎಂ.ನಾಗಭೂಷಣ ಗೌಡ, ಮೇಟಿ ದಿವಾಕರ್ ಗೌಡ, ಸಂಘಟನಾ ಕಾರ್ಯದರ್ಶಿ ಬಿ.ಎಂ.ಸೂರ್ಯನಾರಾಯಣ, ಕಾರ್ಯಕಾರಿ ಸಮಿತಿಯ ಸದಸ್ಯ ಬಿ.ಎ.ಮಲ್ಲೇಶ್ವರಿ, ಮುಖಂಡರಾದ ಲೋಕೇಶ್, ಮಂಜುನಾಥ, ನಾಗರಾಜ, ಉದಯ ಕುಮಾರ್, ಶಿವಕುಮಾರ್, ಶಿವಶಂಕರ್, ಪೆನ್ನಯ್ಯ, ಆಸೀಫ್, ಬಾಬು, ಪರಶುರಾಮ್, ಸುಭಾನ್, ಗಂಗಣ್ಣ, ಹಾಗೂ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.